Belagavi : ಬಂಧನದ ನಂತರ ಸಿ ಟಿ ರವಿ ಅವರನ್ನು ಬೇರೆ ಬೇರೆ ಕಡೆಗೆ ಶಿಫ್ಟ್ ಮಾಡಿದ್ದೇಕೆ? ಮಾಹಿತಿ ಬಹಿರಂಗಪಡಿಸಿದ ಬೆಳಗಾವಿ ಕಮಿಷನರ್

Belagavi : ಸುವರ್ಣ ಸೌಧದಲ್ಲಿ ನಡೆದ ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯೊಂದರ ವೇಳೆ ಸದನದಲ್ಲಿ ಶಾಸಕ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದವನ್ನು ಉಪಯೋಗಿಸಿದ್ದಾರೆ ಎನ್ನುವ ಕಾರಣದಿಂದ ಕೋಲಾಹಲ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಸಿ ಟಿ ರವಿಯ ಬಂಧನ ಆಗಿ, ರಾತ್ರಿ ಇಡೀ ಹೈಡ್ರಾಮಾ ನಡೆಸಿ, ನಂತರ ಕೋರ್ಟ್ ಗೆ ಪ್ರೊಡ್ಯೂಸ್ ಮಾಡಿ, ಕೋರ್ಟ್ ಅವರಿಗೆ ಜಾಮೀನು ನೀಡಿ, ಅವರಲ್ಲಿ ಅವರಿಗೆ ಭರ್ಜರಿ ಸ್ವಾಗತ ಕೂಡ ಸಿಕ್ಕಾಯಿತು. ಆದರೆ ಸಿಟಿ ರವಿ ಬಂಧನದ ರಾತ್ರಿ ಹೈಡ್ರಾಮ ನಡೆಯಲು ಕಾರಣವೇನು? ಅವರನ್ನು ಬೇರೆ ಬೇರೆ ಪೊಲೀಸ್ ಠಾಣೆಗಳಿಗೆ ಏಕೆ ಶಿಫ್ಟ್ ಮಾಡಲಾಯಿತು? ಎಂಬುದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಇದೀಗ ಬೆಳಗಾವಿಯ(Belagavi) ಕಮಿಷನರ್ ಉತ್ತರ ನೀಡಿದ್ದಾರೆ.

ಸಿ ಸಿ.ಟಿ.ರವಿ ಬಂಧನದ ಬಳಿಕ ಬೆಳಿಗ್ಗೆವರೆಗೂ ಬೆಳಗಾವಿಯಾದ್ಯಂತ ಪೊಲೀಸರು ಸುತ್ತಾಟ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಕಾರಣ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಸಿ.ಟಿ.ರವಿ ಅವರ ಭದ್ರತೆಯ ದೃಷ್ಟಿಯಿಂದ ಶಿಫ್ಟ್ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಸುರ್ವಣಸೌಧದಲ್ಲಿ ಸಿ.ಟಿ.ರವಿ ಅವರನ್ನು ಬಂಧಿಸಿದ ಬಳಿಕ ಹಿರೇಬಾಗೇವಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದೆವು. ಆದರೆ ಅಲ್ಲಿಗೆ ಕರೆದೊಯ್ದರೆ ಸಮಸ್ಯೆಯಾಗಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ಬಂದ ಕಾರಣ ಅವರನ್ನು ಖಾನಾಪುರ ಠಾಣೆಗೆ ಕರೆದೊಯ್ಯಲಾಯಿತು. ಹಿರೇಬಾಗೇವಾಡಿ ಠಾಣೆ ಮುಂದೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಖಾನಾಪುರ ಠಾಣೆಗೆ ಕರೆದುಕೊಂಡು ಹೋದಾಗ ಅಲ್ಲಿಯೂ ಜನ ಸೇರಿದ್ದರು. ಕೆಲ ಘಟನೆಗಳು ನಡೆದವು. ಅಷ್ಟರಲ್ಲಿ ಬೆಳಗಾವಿ ನಗರ, ಅಕ್ಕಪಕ್ಕದ ಹಳ್ಳಿಗಳಿಂದಲೂ ಹಲವು ಜನರ ಬರುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಹೀಗಾಗಿ ಸಿ.ಟಿ.ರವಿ ಅವರ ಭದ್ರತೆ ದೃಷ್ಟಿಯಿಂದ ಅವರನ್ನು ಬೇರೆ ಬೇರೆ ಕಡೆ ಕರೆದುಕೊಂಡು ಹೋಗಬೇಕಾಯಿತು ಎಂದು ತಿಳಿಸಿದ್ದಾರೆ.

Leave A Reply

Your email address will not be published.