Naman Ojha Father Jailed: ಭಾರತೀಯ ಕ್ರಿಕೆಟಿಗನ ತಂದೆಗೆ 7 ವರ್ಷ ಜೈಲು ಶಿಕ್ಷೆ

Naman Ojha Father Jailed: ಭಾರತೀಯ ಕ್ರಿಕೆಟಿಗ ನಮನ್ ಓಜಾ ಅವರ ತಂದೆ ವಿನಯ್ ಓಜಾಗೆ ಸುಮಾರು 1.25 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಒಟ್ಟು ನಾಲ್ವರಿಗೆ ಶಿಕ್ಷೆಯಾಗಿದೆ. ಭಾರತೀಯ ಕ್ರಿಕೆಟಿಗನ ತಂದೆಗೆ 7 ವರ್ಷ ಜೈಲು ಶಿಕ್ಷೆ ಮಾತ್ರವಲ್ಲದೆ ಹೆಚ್ಚುವರಿ 7 ಲಕ್ಷ ದಂಡವನ್ನೂ ವಿಧಿಸಲಾಗಿದೆ.

2013 ರಲ್ಲಿ, ಮಧ್ಯಪ್ರದೇಶದ ಜೌಲ್ಖೇಡಾದಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿ ಹಣದ ದುರುಪಯೋಗದ ಪ್ರಕರಣವೊಂದು ನಡೆದಿತ್ತು. 2013ರಲ್ಲಿ ಒಟ್ಟು 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
11 ವರ್ಷಗಳ ಬಳಿಕ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, 10 ವರ್ಷಗಳ ಜೈಲು ಶಿಕ್ಷೆಯ ಜೊತೆಗೆ 80 ಲಕ್ಷ ರೂಪಾಯಿ ದಂಡ ವಿಧಿಸಿದೆ. ವಿನಯ್ ಓಜಾ ಆಗ ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೌಲ್ಖೇಡಾ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.

ಈ ಘಟನೆಯ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂ ಬ್ಯಾಂಕ್ ಉದ್ಯೋಗಿಗಳ ಪಾಸ್ ವರ್ಡ್ ಬಳಸಿ ವಂಚನೆ ಮಾಡಿದ್ದ. ಪ್ರಕರಣದ ತನಿಖೆ ಆರಂಭಿಸಿದಾಗ ನಮನ್ ಓಜಾ ಅವರ ತಂದೆ ವಿನಯ್ ಓಜಾ ಅವರು ಬ್ಯಾಂಕ್ ಆಫ್ ಮಹಾರಾಷ್ಟ್ರದ ಅದೇ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರು ಈ ವಂಚನೆ ಪ್ರಕರಣದೊಂದಿಗೆ ನೇರ ಸಂಪರ್ಕವನ್ನು ಹೊಂದಿರುವುದು ಕಂಡುಬಂದಿದೆ. ಶಾಖೆಯಲ್ಲಿ ಕ್ಯಾಷಿಯರ್ ಹುದ್ದೆಯನ್ನು ಹೊಂದಿದ್ದ ದೀನಾನಾಥ್ ರಾಥೋಡ್ ನಿಧನರಾದರು. ಇವರಲ್ಲದೆ ಟ್ರೇನಿ ಬ್ರಾಂಚ್ ಮ್ಯಾನೇಜರ್ ನೀಲೇಶ್ ಚಟರ್ರೋಲ್ ಅವರ ಐಡಿ ಮತ್ತು ಪಾಸ್ ವರ್ಡ್ ದುರ್ಬಳಕೆಯಾಗಿದೆ. ಈ ಪ್ರಕರಣದಲ್ಲಿ ನೀಲೇಶ್ ನಿರ್ದೋಷಿ ಎಂದು ಸಾಬೀತಾಗಿದೆ.

ಅಭಿಷೇಕ್ ರತ್ನಂ ಮತ್ತು ವಿನಯ್ ಓಜಾ ತಮ್ಮ ಏಜೆಂಟರ ಮೂಲಕ ನಕಲಿ ಖಾತೆಗಳನ್ನು ತೆರೆದು ಈ ಮೂಲಕ 1.25 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ವಕೀಲ ವಿಶಾಲ್ ಕೊಡಲೆ ಬಹಿರಂಗಪಡಿಸಿದ್ದಾರೆ. ಒಟ್ಟು 6 ಜನರಲ್ಲಿ 4 ಮಂದಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ.

Leave A Reply

Your email address will not be published.