Allu Arjun: ನಟ ಅಲ್ಲು ಅರ್ಜುನ್‌ಗೆ ಶಾಕ್‌ ಮೇಲೆ ಶಾಕ್‌; ಸಿಸಿಟಿವಿ ದೃಶ್ಯಾವಳಿ ಬಿಡುಗಡೆ, ಓರ್ವ ಬೌನ್ಸರ್‌ ಬಂಧನ

Allu Arjun: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಅಲ್ಲು ಅರ್ಜುನ್‌ ಪೊಲೀಸ್‌ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದು, ಇದರ ಬೆನ್ನಲ್ಲೇ ನಟ ಅಲ್ಲು ಅರ್ಜುನ್‌ ಸಿಬ್ಬಂದಿಯೋರ್ವನನ್ನು ಬಂಧನ ಮಾಡಲಾಗಿದೆ.

ಪೊಲೀಸರು ಕಾಲ್ತುಳಿದ ಸಿಸಿಟಿವಿ ದೃಶ್ಯಾವಳಿಗಳನ್ನು ನಿನ್ನೆ ಬಿಡುಗಡೆ ಮಾಡಿದ್ದು, ಇದರಲ್ಲಿ ಪೊಲೀಸರು ಕಾಲ್ತುಳಿತದ ಕುರಿತು, ಮಹಿಳೆ ಸಾವಿನ ಕುರಿತು ಹೇಳಿರುವ ಕುರಿತು ಹೇಳಲಾಗಿದೆ.

ಪುಷ್ಪ ಸಿನಿಮಾ ಅಲ್ಲು ಅರ್ಜುನ್‌ ಗೆ ಫೈರ್‌ ಪುಷ್ಪವಾಗಿಯೇ ಪರಿಣಮಿಸಿದೆ. ಎಲ್ಲಿ ನಿಂತರೂ ಬೆಂಕಿ ಬೆಂಕಿ. ಹೌದು, ಸಂಧ್ಯಾ ಥಿಯೇಟರ್‌ನ ಪ್ರೀಮಿಯರ್‌ ಶೋ ಸಂದರ್ಭದಲ್ಲಿ ನಡೆದ ಘಟನೆಯೊಂದು ಅಲ್ಲು ಅರ್ಜುನ್‌ಗೆ ಕಂಟಕವಾಗಿ ಪರಿಣಮಿಸಿದೆ.

ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್‌ನನ್ನು ಹಲವು ಗಂಟೆ ವಿಚಾರಣೆ ಮಾಡಿದ್ದು, ನಂತರ ಅವರ ವೈಯಕ್ತಿಕ ಬೌನ್ಸರ್‌ನಲ್ಲಿ ಒಬ್ಬರಾದ ಆಂಟೋನಿ ಅವರ ಬಂಧನವಾಗಿದೆ. ಬೌನ್ಸರ್‌ ಆಂಟೋನಿ ಅಭಿಮಾನಿಗಳ ಗುಂಪನ್ನು ತಳ್ಳಿದ ಆರೋಪವಿದೆ. ಇನ್ನು ಒಟ್ಟಾರೆ ಹೇಳುವುದಾದರೆ ಈ ಪ್ರಕರಣದಲ್ಲಿ ಪೊಲೀಸರು 18 ಜನರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ಜೊತೆಗೆ, ಅಲ್ಲು ಅರ್ಜುನ್‌ನ ವೈಯಕ್ತಿಕ ಸಿಬ್ಬಂದಿ ಹೆಸರುಗಳನ್ನು ರಿಮಾಂಡ್‌ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

Leave A Reply

Your email address will not be published.