Belthangady: ವಿದ್ಯುತ್ ಲೈನ್‌ನ ಮೇಲೆ ಬಿದ್ದ ಮರ; ಗುಡ್ಡಕ್ಕೆ ಬೆಂಕಿ
Belthangady: ವಿದ್ಯುತ್ ಲೈನ್‌ನ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ, ಗುಡ್ಡಕ್ಕೆ ಬೆಂಕಿ ಬಿದ್ದಿರುವ ಘಟನೆಯೊಂದು ಮುಂಡಾಜೆಯ ಕಡಂಬಳ್ಳಿ ಎನ್ನುವಲ್ಲಿ ನಿನ್ನೆ (ಮಂಗಳವಾರ) ನಡೆದಿದೆ.
ಮರ ವಿದ್ಯುತ್‌ಲೈನ್ ಮತ್ತು ರಸ್ತೆ ಮೇಲೆ ಉರುಳಿ ಬಿದ್ದಾಗ ಎರಡು ಎಲ್‌ಟಿ ವಿದ್ಯುತ್ ಕಂಬಗಳು ಬಿದ್ದಿದ್ದು, ಈ ವೇಳೆ ಬೆಂಕಿ ಉಂಟಾಗಿದೆ. ಸರಿ ಸುಮಾರು ಒಂದು ಎಕರೆಯಷ್ಟು ಗುಡ್ಡ ಪ್ರದೇಶ ಬೆಂಕಿಯಿಂದ ಸುಟ್ಟು ಹೋಗಿರುವ ಘಟನೆ ನಡೆದಿದೆ.
ಗುಡ್ಡದ ಸಮೀಪ ರಬ್ಬರ್ ತೋಟವೊಂದು ಇದ್ದಿದ್ದು, ಬೆಂಕಿ ಹೆಚ್ಚಾಗಿ ಹರಡದಂತೆ ಸ್ಥಳೀಯರು ಮಾಡಿದ್ದಾರೆ. ಮೆಸ್ಕಾಂ ನವರು ಕೂಡಲೇ ವಿಷಯ ಅರಿತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.