C T Ravi: ‘ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ’ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ ವಿಚಾರ – ಸಿ ಟಿ ರವಿ ಪ್ರತಿಕ್ರಿಯೆ ಏನು?

C T Ravi: ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಮಾಜಿ ಸಚಿವ ಸಿ.ಟಿ. ರವಿ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ(C T Ravi) ಅಶ್ಲೀಲ ಪದ ಉಪಯೋಗಿಸಿದ್ದಾರೆ ಎಂಬ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೆಬ್ಬಾಳ್ಕರ್ ಅವರು ಭಾರಿ ರೊಚ್ಚಿಗೆದ್ದಿದ್ದು ನನಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನಿರುವವಳಲ್ಲ ಎಂದು ಶಪಥ ಮಾಡಿದ್ದಾರೆ. ಅಲ್ಲದೆ ಈ ವಿಚಾರ ಇದೀಗ ಆಣೆ ಪ್ರಮಾಣದ ಮಾತು ಕೇಳಿ ಬಂದಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದ(Dharmasthala) ಮಂಜುನಾಥನ ಸನ್ನಿಧಿವರೆಗೂ ಹೋಗಿದೆ.

ಹೌದು. ಲಕ್ಷ್ಮಿ ಅವರ ವಿರುದ್ಧ ನಾನು ಅಶ್ಲೀಲ ಪದ ಪ್ರಯೋಗ ಮಾಡಿಲ್ಲ ಎಂದು ಸಿಟಿ ರವಿ ಅವರು ವಾದಿಸುತ್ತಿದ್ದಾರೆ. ಹೀಗಾಗಿ ಸಿಟ್ಟಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀವು ಆ ಪದವನ್ನು ಉಪಯೋಗಿಸಿಲ್ಲ ಎಂದಾದರೆ ಧರ್ಮಸ್ಥಳಕ್ಕೆ ಬಂದು, ನಾನು ಆ ಪದ ಬಳಸಿಯೇ ಇಲ್ಲ ಅಂತ ಸಿಟಿ ರವಿ ಹೇಳಬೇಕು. ನಾನು ದೇವರನ್ನು ನಂಬಿದ್ದೀನಿ, ನೀವೂ ದೇವರನ್ನು ನಂಬಿದ್ದೀರಿ. ನಿಮ್ಮ ಊರಿಗೆ ಧರ್ಮಸ್ಥಳ ತುಂಬಾ ಹತ್ತಿರ ಇದೆ. ಬನ್ನಿ ನೀವೂ ಪ್ರಮಾಣ ಮಾಡಿ. ನಾನೂ ಪ್ರಮಾಣ ಮಾಡ್ತೀನಿ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಗುಡುಗಿದ್ದಾರೆ. ಈ ಬೆನ್ನಲ್ಲೇ ಸಿಕ್ಕಿದವೆಯವರು ಲಕ್ಷ್ಮಿ ಹೆಬ್ಬಾಳ್ಕರ್ ಸವಾಲಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಟಿ ರವಿ ಅವರು ಈ ಬಗ್ಗೆ ದಿನಕ್ಕೊಂದು ಹೇಳಿಕೆ ಕೊಡೋರಿಗೆ ನಾನು ಪ್ರತಿಕ್ರಿಯೆ ಕೊಡಲು ಹೋಗಲ್ಲ‌. ಎಂದಿದ್ದಾರೆ. ಈ ಪ್ರಕರಣದ ತನಿಖೆ ಬಾಕಿ ಇದೆ.ಸರ್ಕಾರ ಸಿಓಡಿ ಗೆ (COD) ಕೊಟ್ಟಿದ್ದೀವಿ ಅಂತ ಹೇಳಿದ್ದಾರೆ. ನ್ಯಾಯಲಯದಲ್ಲಿ ನ್ಯಾಯ ಸಿಗಲಿ ಅಮೇಲೆ ನೋಡೋಣ. ಇವರ ದೌರ್ಜನ್ಯ ಹೇಗಿದೆ ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಹೀಗಾಗಿ ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಕೆಸರಿನ ಮೇಲೆ ನಾನು ಬಿದ್ರು ನಾನೇ ಹೋಗಿ ಸ್ನಾನ ಮಾಡಬೇಕು, ಕೆಸರು ನನ್ನ ಮೇಲೆ ಬಿದ್ರೂ ನಾನೇ ಸ್ನಾನ ಮಾಡಬೇಕು. ಅದಷ್ಟು ಕೇಸರಿನಿಂದ ದೂರ ಇರು ಅಂತಾ ದೊಡ್ಡವರು ಹೇಳಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.

Leave A Reply

Your email address will not be published.