RSS ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧವೇ ಸಿಡಿದೆದ್ದ ಹಿಂದೂ ಸಂಘಟನೆಗಳು !!
RSS ಎಂದರೆ ಅದು ಹಿಂದೂ ಸಂಘಟನೆ ಎಂದೇ ದೇಶದಲ್ಲಿ ಗುರುತಿಸಲ್ಪಟ್ಟಿದೆ. ದೇಶಕ್ಕೆ ಪ್ರಧಾನಿ ಆದಿಯಾಗಿ ಹಲವಾರು ನಾಯಕರನ್ನು ಕೊಟ್ಟ ಸಂಘಟನೆ ಆರ್ ಎಸ್ ಎಸ್. ಆದರೆ ಈಗ ಅಚ್ಚರಿ ಎಂಬಂತೆ ಆರ್ ಎಸ್ ಎಸ್ ಸರಸಂಗ ಚಾಲಕ ಮೋಹನ್ ಭಾಗವತ್ ವಿರುದ್ಧ ಹಿಂದೂ ಸಂಘಟನೆಗಳು ತಿರುಗಿ ಬಿದ್ದಿವೆ.
ಹೌದು ಇತ್ತೀಚೆಗೆ ಆರೆಸ್ಸೆಸ್(RSS) ನ ಮುಖ್ಯಸ್ಥ ಮೋಹನ್ ಭಾಗವತ್(Mohan Bhagawat ) ಅವರು ರಾಮ್ ಮಂದಿರ ಕಟ್ಟಿದರೆ ಅವರು ಹಿಂದೂ ನಾಯಕನಾಗಲು ಸಾಧ್ಯವಿಲ್ಲ. ಅಲ್ಲದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಳಿಕ ದೇಶಾದ್ಯಂತ ಮಂದಿರ ಮತ್ತು ಮಸೀದಿ ವಿಚಾರವಾಗಿ ಗೊಂದಲಗಳನ್ನು ಏರ್ಪಡಿಸಿ ಕೋಮು ಗಲಭೆಗಳನ್ನು ನಿರ್ಮಿಸಲಾಗುತ್ತಿದೆ. ಇದು ಕಂಡನೀಯ. ನಮ್ಮ ದೇಶವು ಕೋಮು ಸೌಹಾರ್ದತೆಗೆ ಒತ್ತು ನೀಡಬೇಕು. ನಾವು ಇದನ್ನೇ ಜೀವಾಳವಾಗಿ ರೂಪಿಸಿಕೊಂಡು ಬಂದವರು. ನಮ್ಮ ಸಂಘಟನೆಯು ಕೂಡ ಇದನ್ನೇ ಅನುಸರಿಸಿಕೊಂಡು ಹೋಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದೇ ವಿಚಾರವಾಗಿ ಹಿಂದೂ ಸಂಘಟನೆಗಳು ಮೋಹನ್ ಭಾಗವತ್ ವಿರುದ್ಧ ತಿರುಗಿ ಬಿದ್ದಿವೆ. ಅಖಿಲ ಭಾರತೀಯ ಸಂತ ಸಮಿತಿ ಆಕ್ರೋಶ ಹೊರಹಾಕಿದೆ.
ಇದೀಗ ಎಕೆಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರನಂದ ಸರಸ್ವತಿಯವರು, ಹಿಂದೂಗಳ ಧಾರ್ಮಿಕ ನಂಬಿಕೆಗಳ ವಿಚಾರದಲ್ಲಿ ನಿರ್ಣಯ ಕೈಗೊಳ್ಳಬೇಕಿರುವುದು ಧಾರ್ಮಿಕ ಮುಖಂಡರೇ ಹೊರತು, ಸಾಂಸ್ಕೃತಿಕ ಸಂಘಟನೆ ಆರ್‌ಎಸ್‌ಎಸ್ ಅಲ್ಲ. ಧಾರ್ಮಿಕ ಗುರುಗಳ ನಿರ್ಧಾರಗಳನ್ನು ಸಂಘಪರಿವಾರ ಮತ್ತು ವಿಹೆಚ್‌ಪಿ ಒಪ್ಪಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಲ್ಲದೆ ಜ್ಯೋತಿರ್ಮಠದ ಅವಿಮುಕ್ತೇಶ್ವರನಂದ ಶಂಕರಾಚಾರ್ಯರು ಸಹ ಭಾಗವತ್ ಧೋರಣೆಯನ್ನು ವಿರೋಧಿಸಿದ್ದಾರೆ. ಹಿಂದೆ ನಾಶ ಮಾಡಲ್ಪಟ್ಟಿದ್ದ ದೇಗುಲಗಳನ್ನು ಗುರುತಿಸಿ ಪುನರುಜ್ಜೀನಗೊಳಿಸುವ ಮೂಲಕ ಹಿಂದೂಗಳು ತಮ್ಮ ಆಸ್ಮಿತೆಯನ್ನು ಪುನರ್‌ರೂಪಿಸಿಕೊಳ್ತಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಅವಿಮುಕ್ತೇಶ್ವರನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.