Chaitra Kundapura : ರಜತ್ ಜೊತೆ ಮತ್ತೆ ಕಿರಿಕ್ – ಮತ್ತೆ ದೇವರ ಮೊರೆ ಹೋದ ಚೈತ್ರ ಕುಂದಾಪುರ, ದೊಡ್ಮನೆಯಲ್ಲಿ ನಡೆದೇ ಹೋಯ್ತು ದೊಡ್ಡ ಪವಾಡ !!

Share the Article

Chaitra Kundapura : ಬಿಗ್ ಬಾಸ್ ಮನೆಯಲ್ಲಿರುವ ಚೈತ್ರ ಕುಂದಾಪುರ ಅವರ ಫೈಯರ್ ಬ್ರಾಂಡ್ ಟುಸ್ ಆಗಿದೆ. ಬಿಗ್​ಬಾಸ್​ಗೆ ಬಂದ ಮೊದ ಮೊದಲು ಚೆನ್ನಾಗಿಯೇ ಇದ್ದ ಚೈತ್ರಾ ಏಕಾಏಕಿ ಡಲ್​ ಹೊಡೆದಿದ್ದಾರೆ. ಕೆಲವು ದಿನಗಳಿಂದ ಚೈತ್ರಾ ಕುಂದಾಪುರ ಮಾತಿನ ರೀತಿ ಬದಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಕುಗ್ಗದ ಚೈತ್ರಾ ಕುಂದಾಪುರ ಈಗ ಸಖತ್​ ಸೈಲೆಂಟ್​ ಆಗಿದ್ದಾರೆ.

ಇನ್ನು ಚೈತ್ರಾ ಕುಂದಾಪುರ(Chaitra Kundapura )ಅವರು ದೇವರಿಗೆ ಸಾಕಷ್ಟು ನಡೆದುಕೊಳ್ಳುತ್ತಾರೆ. ಅವರು ಆಗಾಗ ದೇವರ ಮೊರ ಹೋಗುತ್ತಾರೆ. ಈಗ ಅವರು ದೇವರ ಕೈಗಳ ಮೇಲೆ ಎರಡು ಚೀಟಿ ಬರೆದು ಇಟ್ಟಿದ್ದಾರೆ. ಈ ವೇಳೆ ಪವಾಡವೇ ನಡೆದುಹೋಗಿದೆ. ಆ ಸಂದರ್ಭದ ವಿಡಿಯೋನ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಯಸ್, ಚೈತ್ರಾ ಅವರಿಗೆ ದೊಡ್ಮನಯೆಲ್ಲಿ ಉಸಿಗಟ್ಟಿಸೋ ವಾತಾವರಣ ನಿರ್ಮಾಣ ಆಗಿದೆ. ಇದರಿಂದ ಹೊರ ಬರೋದು ಹೇಗೆ ಎಂದು ಗೊತ್ತಾಗದೆ ಒದ್ದಾಡುತ್ತಿದ್ದಾರೆ. ರಜತ್ ಜೊತೆ ಚೈತ್ರ ಅವರು ಆಗಾಗ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ. ಅಂತೆಯೇ ಇದೀಗ ಅವರ ಜೊತೆ ಮತ್ತೆ ಕಿರಿಕ್ ಆಗಿದೆ. ಆ ಬಳಿಕ ಅವರು ದೇವರ ಭುಜದ ಸಮೀಪ ಎರಡು ಚೀಟಿ ಬರೆದು ಇಟ್ಟಿದ್ದಾರೆ. ಈ ವೇಳೆ ದೇವರ ಭುಜದಿಂದ ಒಂದು ಚೀಟಿ ಬಿದ್ದಿದೆ. ಅನೇಕರು ಇದನ್ನು ಪವಾಡ ಎಂದು ಕರೆದಿದ್ದಾರೆ. ಸದ್ಯ ಕಲರ್ಸ್ ಹಂಚಿಕೊಂಡಿರುವ ಈ ಪ್ರೊಮೋ ವೈರಲ್ ಆಗಿದ್ದು ಚೈತ್ರ ಅವರು ಆ ಚೀಟಿಗಳಲ್ಲಿ ಏನು ಬರೆದಿಟ್ಟಿದ್ದರು, ದೇವರು ಯಾವ ಚೀಟಿಯನ್ನು ಬೀಳಿಸಿತು ಇಂದು ಜನರಲ್ಲಿ ಕುತೂಹಲ ಕೆರಳಿದೆ. ಇಂದಿನ ಎಪಿಸೋಡ್ ನಲ್ಲಿ ಇದಕ್ಕೆ ಉತ್ತರ ಸಿಗಲಿದೆ.

Leave A Reply