C T Ravi: ಸಿ ಟಿ ರವಿ ನಿಜಕ್ಕೂ ಅಶ್ಲೀಲ ಪದ ಬಳಸಿದರೆ? ಇಲ್ಲಿದೆ ನೋಡಿ ಒರಿಜಿನಲ್ ವಿಡಿಯೋ

C T Ravi: ಸುವರ್ಣ ಸೌಧದಲ್ಲಿ ನಡೆದ ಈ ಸಲದ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯೊಂದರ ವೇಳೆ ಸದನದಲ್ಲಿ ಶಾಸಕ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದವನ್ನು ಉಪಯೋಗಿಸಿದ್ದಾರೆ ಎನ್ನುವ ಕಾರಣದಿಂದ ಕೋಲಾಹಲ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಸಿ ಟಿ ರವಿಯ ಬಂಧನ ಆಗಿ, ರಾತ್ರಿ ಇಡೀ ಹೈಡ್ರಾಮಾ ನಡೆಸಿ, ನಂತರ ಕೋರ್ಟ್ ಗೆ ಪ್ರೊಡ್ಯೂಸ್ ಮಾಡಿ, ಕೋರ್ಟ್ ಅವರಿಗೆ ಜಾಮೀನು ನೀಡಿ, ಅವರಲ್ಲಿ ಅವರಿಗೆ ಭರ್ಜರಿ ಸ್ವಾಗತ ಕೂಡ ಸಿಕ್ಕಾಯಿತು. ಆದರೆ ಸಿಟಿ ರವಿ(C T Ravi)ನಾನು ಆ ರೀತಿ ಪದವನ್ನು ಬಳಸಿಲ್ಲ ಎಂದು ಮಾಧ್ಯಮಗಳ ಮುಂದೆಲ್ಲಾ ಬೊಬ್ಬಿರಿಯುತ್ತಿದ್ದಾರೆ. ಹಾಗಿದ್ರೆ ಪರಿಷತ್ತಿನೊಳಗೆ ಸಿಟಿ ರವಿ ಅವರು ಮಾತನಾಡಿದ್ದೇನು? ನಿಜಕ್ಕೂ ಆ ಒಂದು ಪ್ರಶ್ನೆಯಲ್ಲಿ ಪದವನ್ನು ಬಳಸಿದರಾ? ಅದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ ಅಸಲಿ ವಿಡಿಯೋ.

ವಿಡಿಯೋದಲ್ಲಿ ಪೋಸ್ಟರ್ ಗಳನ್ನೂ ಹಿಡಿದುಕೊಂಡು ಸಿಟಿ ರವಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ನಡುವೆ ವಾಗ್ವಾದ ನಡೆದಿದ್ದು ಸಿಟಿ ರವಿ ಅವರು ಅಶ್ಲೀಲ ಪದ ಬಳಕೆ ಮಾಡಿರುವುದು ಕಂಡು ಬರುತ್ತಿದೆ. ಅದನ್ನು ಅವರು ಇಂಗ್ಲೀಷಿನಲ್ಲಿ ಹೇಳಿರುವುದು ಕಾರಣಬಹುದು. ಇದಕ್ಕೆ ಪ್ರತ್ಯುತ್ತರವಾಗಿ ಎದುರುಗಡೆ ಕುಳಿತಿದ್ದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊ…ಗಡುಕ ಎಂದು ಹೇಳಿರುವುನ್ನೂ ಕೂಡ ಕೇಳಬಹುದು. ಒಟ್ಟಿನಲ್ಲಿ ಇಬ್ಬರು ನಾಯಕರು ಸದನದೊಳಗಡೆ ಹದ್ದು ಮೀರಿ ವರ್ತಿಸಿರುವುದು ಕಂಡು ಬರುತ್ತಿದೆ.

Leave A Reply

Your email address will not be published.