D K Suresh: ಡಿ ಕೆ ಸುರೇಶ್ ಹೆಂಡತಿ ಅವರನ್ನು ಬಿಟ್ಟೋಗಿದ್ಯಾಕೆ? ಹೆಂಡತಿ-ಮಗ ಈಗಎಲ್ಲಿದ್ದಾರೆ? ಯಾರು ತಿಳಿಯದ ಸತ್ಯ ಬಯಲು

D K Suresh: ಕರ್ನಾಟಕ ರಾಜಕೀಯದಲ್ಲಿ ಫೈಯರ್ ಬ್ರಾಂಡ್ ಎಂದು ಖ್ಯಾತಿ ಪಡೆದಿರುವ ಡಿಕೆ ಶಿವಕುಮಾರ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವರ ಫ್ಯಾಮಿಲಿ ಅವರ ಬಿಜಿನೆಸ್ ಬಗ್ಗೆ ಯಾವಾಗಲೂ ಅವರು ಮುಕ್ತವಾಗಿಯೇ ಇರುತ್ತಾರೆ. ಆದರೆ ಅವರ ತಮ್ಮ ಡಿಕೆ ಸುರೇಶ್ ಅವರ ಕುಟುಂಬದ ಕುರಿತು ಯಾರಿಗೂ ಅಷ್ಟು ಮಾಹಿತಿ ಇಲ್ಲ. ಅವರು ಎಂದು ಅದನ್ನು ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ. ರಾಮ ಲಕ್ಷ್ಮಣನಂತೆ ಇರುವ ಈ ಅಣ್ಣತಮ್ಮಂದಿರು ಕುಟುಂಬ ವಿಚಾರದಲ್ಲಿ ಮಾತ್ರ ಭಿನ್ನ ಭಿನ್ನಭಿನ್ನರಾಗಿದ್ದಾರೆ. ಅಂದರೆ ಡಿಕೆ ಶಿವಕುಮಾರ್ ಅವರು ಹೆಂಡತಿ ಮಕ್ಕಳೊಂದಿಗೆ ಕೂಡು ಕುಟುಂಬದಲ್ಲಿ ಸಂಸಾರ ಮಾಡುತ್ತಿದ್ದರೆ ಅವರ ತಮ್ಮ ಡಿಕೆ ಸುರೇಶ್ ಮಾತ್ರ ಏಕಾಂಗಿಯಾಗಿದ್ದಾರೆ. ಯಾಕೆಂದರೆ ಅವರು ತಮ್ಮ ಪತ್ನಿಯಿಂದ ದೂರವಾಗಿದ್ದಾರೆ.

 

ಯಸ್.. ಡಿಕೆ ಸುರೇಶ್ ಅವರು ತಮ್ಮ ಹೆಂಡತಿಯಿಂದ ದೂರ ಇದ್ದಾರೆ. ಹಾಗಿದ್ರೆ ಸುರೇಶ್ ಅವರ ಫ್ಯಾಮಿಲಿ ಎಲ್ಲಿದೆ? ಅವರಿಂದ ಹೆಂಡತಿ ಯಾಕೆ ದೂರ ಆಗಿದ್ದಾರೆ? ಗಂಡ ಹೆಂಡತಿಯರಿಬ್ಬರೂ ಒಬ್ಬರನ್ನೊಬ್ಬರು ಅಗಲಿರುವುದೇಕೆ? ಅವರ ಪತ್ನಿ ಯಾರು? ಅವರು ದೂರವಾಗಿದ್ದೇಕೆ? ಈಗ ಎಲ್ಲಿದ್ದಾರೆ? ಅವರಿಗೆ ಮಗ ಇದ್ದಾನಾ? ಇದ್ದರೆ ಆತ ಎಲ್ಲಿದ್ದಾನೆ? ಮಗನಿಗೆ ವಯಸ್ಸು ಎಷ್ಟಾಗಿದೆ? ಹೆಂಡತಿ, ಮಗನ ಜೊತೆ ಡಿಕೆ ಸುರೇಶ್ ಈಗಲೂ ಸಂಪರ್ಕದಲ್ಲಿದ್ದಾರಾ? ಈ ಎಲ್ಲಾ ಪ್ರಶ್ನೆಗಳು ಅವರ ಅಭಿಮಾನಿಗಳನ್ನು, ಪಕ್ಷದ ಕಾರ್ಯಕರ್ತರನ್ನು ಕಾಡುತ್ತಿದೆ. ಇದಕ್ಕೆ ಇದೀಗ ಡಿಕೆ ಸುರೇಶ್ ಅವರೇ ಉತ್ತರ ನೀಡಿದ್ದಾರೆ.

 

ಪತ್ನಿ ಬಗ್ಗೆ ಡಿಕೆ ಸುರೇಶ್ ಹೇಳಿದ್ದೇನು?

ಡಿಕೆ ಸುರೇಶ್ ಇದೇ ಮೊದಲ ಬಾರಿಗೆ ತಮ್ಮ ಪತ್ನಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ತಮ್ಮ ಮಗನ ಬಗ್ಗೆಯೂ ಮೌನ ಮುರಿದಿದ್ದು, ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಸುರೇಶ್ ಅವರ ಪತ್ನಿ ಸದ್ಯ ಅವರಿಂದ ದೂರ ಆಗಿದ್ದಾರೆ. ನನ್ನ ಚಿಂತನೆಗಳೇ ಬೇರೆ, ಅವರ ಚಿಂತನೆಗಳೇ ಬೇರೆ. ಹಾಗಾಗಿ ನಮ್ಮಿಬ್ಬರ ನಡುವೆ ಹೊಂದಾಣಿಕೆ ಆಗಿಲ್ಲ. ಇದೇ ಕಾರಣಕ್ಕೆ ಇಬ್ಬರೂ ದೂರ ಆದೆವು ಅಂತ ಹೇಳಿದ್ದಾರೆ. ಆದರೆ ಅವರ ಪತ್ನಿ ಯಾರು? ಈಗ ಎಲ್ಲಿದ್ದಾರೆ ಎಂಬ ಬಗ್ಗೆ ಡಿಕೆ ಸುರೇಶ್ ಏನನ್ನೂ ಹೇಳಿಲ್ಲ.

 

ಮಗನ ಬಗ್ಗೆ ಡಿಕೆ ಸುರೇಶ್‌ ಕನಸೇನು ಗೊತ್ತಾ?

ತಮ್ಮ ಮಗನ ಬಗ್ಗೆ ತಮಗಿರುವ ಕನಸುಗಳು, ಆತ ಮುಂದೆ ಏನು ಆಗಬೇಕು ಎಂಬ ಬಗ್ಗೆ ಡಿಕೆ ಸುರೇಶ್ ಮನ ಬಿಚ್ಚಿ ಮಾತನಾಡಿದ್ದಾರೆ. ನಮ್ಮ ಅಪ್ಪನ ಮಾತನ್ನೇ ನಾನು ಕೇಳಿರಲಿಲ್ಲ. ಆದ್ರೆ ಆತ ಈಗಿನ ಕಾಲದ ಹುಡುಗ, ಹೀಗಾಗಿ ಅವನ ಯೋಚನೆಗಳು, ಪ್ಲಾನ್ ಏನಿರುತ್ತೆ ಗೊತ್ತಿಲ್ಲ. ಅವನು ನನ್ನ ಮಾತು ಕೇಳ್ತಾನೋ, ಕೇಳಲ್ವೋ ಗೊತ್ತಿಲ್ಲ. ನೋಡೋಣ ವಿಧಿಯಾಟ ಹೇಗಿದೆ ಅಂತ ಡಿಕೆ ಸುರೇಶ್ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

Leave A Reply

Your email address will not be published.