Bigg Boss: ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ದೆವ್ವ – ಗಡಗಡ ನಡುಗಿದ ಕಂಟೆಸ್ಟೆಂಟ್ಸ್, ಅಚ್ಚರಿ ವಿಡಿಯೋ ವೈರಲ್
Bigg Boss: ಬಿಗ್ಬಾಸ್ ಮನೆಯಲ್ಲಿ ಆಗಿಂದಾಗೆ ದೆವ್ವ ಇರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿರುತ್ತವೆ. ಅದಕ್ಕೆ ಪೂರಕವೆಂಬಂತೆ ಲೋಟ, ತಟ್ಟೆಗಳು ತನ್ನಿಂದ ತಾನೆ ಬೀಳುತ್ತಿರುತ್ತವೆ, ಬಹುತೇಕ ಪ್ರತಿ ಸೀಸನ್ನಲ್ಲಿಯೂ ಇದು ನಡೆಯುತ್ತಲೇ ಬಂದಿದೆ. ಅಂತೆಯೇ ಇದೀಗ ಈ ಸೀಸನ್ನಲ್ಲೂ ದೆವ್ವದ ಇರುವವಿಕೆ ಕಂಡು ಬಂದಿದೆ..!!
ಯಸ್, ಬಿಗ್ಬಾಸ್(Bigg Boss)ಮನೆಯಲ್ಲಿ ದೆವ್ವದ ಕಾಟ ಶುರುವಾಗಿದ್ದು, ಸ್ಫರ್ಧಿಗಳು ಕಂಗಾಲಾಗಿ ಕೂಗಾಡಲು ಶುರು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋ ಸಖತ್ ವೈರಲ್ ಆಗಿದೆ.
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/1aeufal7Ma
— Colors Kannada (@ColorsKannada) December 21, 2024
ಸದ್ಯ ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ ಬಿಗ್ಬಾಸ್ ಮನೆಯಲ್ಲಿ ದೆವ್ವವೊಂದು ಕಾಣಿಸಿಕೊಂಡಿದ್ದು, ಅಡುಗೆಮನೆಯಲ್ಲಿ ಗೌತಮಿ, ಮೋಕ್ಷಿತಾ ಹಾಗೂ ಮಂಜು ಕೂಗಾಡಲು ಶುರು ಮಾಡುತ್ತಾರೆ. ಇದನ್ನು ಕೇಳಿಸಿಕೊಂಡು ಗಾಬರಿಯಿಂದ ಓಡಿ ಬರುವ ಮನೆಯ ಇತರೆ ಸದಸ್ಯರು ದೆವ್ವ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಈ ವೇಳೆ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಚೈತ್ರಾ ನೆಲದ ಮೇಲೆ ಬೀಳುತ್ತಾರೆ. ಇದೇ ವೇಳೆ ಮನೆಯ ಮುಖ್ಯದ್ವಾರದಿಂದ ನೂರು ಜನ್ಮಕ್ಕೂ ಸೀರಿಯಲ್ ತಾರೆಗಳು ಎಂಟ್ರಿ ಕೊಟ್ಟಿದ್ದು, ಸದ್ಯ ಈ ಪ್ರೋಮೋ ವೈರಲ್ ಆಗಿದೆ.