ಉಡುಪಿ: ಆಧಾರ್‌ ಕಾರ್ಡ್‌ ನವೀಕರಣ ಮಾಡಿಕೊಂಡಿರದಿದ್ದರೇ ಕೂಡಲೇ ಮಾಡಿ; ಈ ಸುದ್ದಿ ತಕ್ಷಣ ಓದಿ

Share the Article

ಉಡುಪಿ: 10 ವರ್ಷಗಳ ಹಿಂದೆ ಆಧಾರ್‌ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರೂ ತಮ್ಮ ತಮ್ಮ ಗುರುತಿನ ಹಾಗೂ ವಿಳಾಸದ ದಾಖಲೆಗಳನ್ನು ಸಮೀಪದ ಆಧಾರ್‌ ಕೇಂದ್ರದಲ್ಲಿ ಮರು ಅಪ್ಲೋಡ್‌ ಮಾಡಲು ಜಿಲ್ಲೆಯಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸ ನೋಂದಣಿ, ಮರು ನೋಂದಣಿ ಹಾಗೂ ಬಯೋಮೆಟ್ರಿಕ್‌ ನೀಡಿ ಆಧಾರ್‌ ಗುರುತಿನ ಚೀಟಿ ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಜಿಲ್ಲಾ ಮಟ್ಟದ ಆಧಾರ್‌ ಮಾನಿಟರಿಂಗ್‌ ಸಮಿತಿ ಸಭೆಯ ಅಧ್ಯಕ್ಷತೆಯಲ್ಲಿ ಈ ಕುರಿತು ಜಿಲ್ಲಾಧಿಕಾರಿ ಹೇಳಿದ್ದಾರೆ. ಜಿಲ್ಲೆಯ ಆಯ್ದ ಬ್ಯಾಂಕ್‌ಗಳು, ಅಂಚೆ ಕಚೇರಿಗಳಲ್ಲಿ ಆಧಾರ್‌ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಕಚೇರಿ ಸಮಯದಲ್ಲಿ ಸಾರ್ವಜನಿಕರು ಆಧಾರ್‌ ಸೇವೆಯನ್ನು ಪಡೆಯಬಹುದು ಎಂದು ಅವರು ಹೇಳಿದರು.

ಅಂಚೆ ಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಿಸಲು ಐದು ವರ್ಷದೊಳಗಿನ ಮಕ್ಕಳು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ. ಆಧಾರ್‌ ಕಾರ್ಡ್‌ ಹೊಂದಿರುವವರು ಯಾರಾದರೂ ಮರಣ ಹೊಂದಿದ್ದರೇ, ಅವರ ಕಾನೂನು ಬದ್ಧ ವಾರಸುದಾರರು ಅವರ ಮರಣ ಪ್ರಮಾಣ ಪತ್ರವನ್ನು ನೀಡಿ, ಆಧಾರ್‌ ಕಾರ್ಡ್‌ ಅನ್ನು ತಪ್ಪದೇ ರದ್ದು ಮಾಡಬೇಕು. ಇಲ್ಲದಿದ್ದರೆ ಇದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಉಪಯೋಗವಾಗುವ ಸಾಧ್ಯತೆಗಳಿಗೆ ಎಡೆ ಮಾಡಿಕೊಡುತ್ತದೆ. ಈ ರೀತಿ ಸಂಭವಿಸಿದರೆ ವಾರಸುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕ್ಲಸ್ಟರ್‌ ಮಟ್ಟದಲ್ಲಿ ಕ್ಯಾಂಪನ್ನು ನಿಯೋಜನೆ ಮಾಡಿ ಶಾಲಾ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್‌ ಮಾಡಲು ಡಿಸಿ ಸೂಚನೆ ನೀಡಿದ್ದಾರೆ. ಹಾಗೆನೇ ಮರುನೋಂದಣಿ ಕುರಿತು ಹೆಚ್ಚಿನ ಪ್ರಚಾರ ಮಾಡಲು ಉತ್ತೇಜನ ನೀಡಬೇಕು ಎಂದು ಕೂಡಾ ಅವರು ಈ ಸಂದರ್ಭದಲ್ಲಿ ಹೇಳಿದರು.

ಹಾಗೆನೇ ಸುಳ್ಳು ದಾಖಲೆಗಳನ್ನು ನೀಡಿ ಆಧಾರ್‌ ನೋಂದಣಿಯನ್ನು ಹೊರದೇಶಗಳಿಂದ ಬಂದಿರುವ ಜನರು ಮಾಡಲು ಮುಂದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕುರಿತು ಎಚ್ಚರ ವಹಿಸುವುದು ಅತೀ ಮುಖ್ಯ. ನಕಲಿ ಆಧಾರ್‌ ಪ್ರತಿಗಳನ್ನು ಹೊಂದುವುದರ ಕುರಿತು ಕೂಡಾ ಅನೇಕ ದೂರುಗಳು ಬಂದಿದ್ದು, ಇದರ ಪರಿಶೀಲನೆ ಮಾಡಬೇಕು ಎಂದು ಡಿಸಿ ಸೂಚನೆ ನೀಡಿದ್ದಾರೆ.

ಸೂಚನೆ: ಪ್ರತಿಯೊಬ್ಬರು 10 ವರ್ಷಗಳ ಹಿಂದೆ ಆಧಾರ್‌ ಕಾರ್ಡ್‌ ನೋಂದಣಿ ಮಾಡಿಸಿಕೊಂಡವರು ಮರು ನೋಂದಣಿ ಮಾಡಬೇಕಾಗಿದ್ದು, ಇದನ್ನು ಈ ಕೂಡಲೇ ಮಾಡಬೇಕು. ಆಧಾರ್‌ ಕೇಂದ್ರಗಳಲ್ಲಿ ಅಥವಾ myAadaar.uidai.gov.in ಪೋರ್ಟಲ್‌ನಲ್ಲಿ ನೀವು ನೇರವಾಗಿ ನವೀಕರಣ ಮಾಡಬಹುದು. ಒಂದೊಮ್ಮೆ ನವೀಕರಣ ಮಾಡದೇ ಇದ್ದಲ್ಲಿ ಆಧಾರ್‌ ಕಾರ್ಡ್‌ ನಿಷ್ಕ್ರಿಯಗೊಳ್ಳುತ್ತದೆ. ಆಧಾರ್‌ ಕಾರ್ಡ್‌ನಿಂದ ಸೇವೆ ಪಡೆಯಲು ಇದು ನಿಮ್ಮ ತಡೆಯಾಗುತ್ತದೆ ಎಂದು ತಿಳಿಸಿದರು.

Leave A Reply