Home News C T Ravi: ಸಿ ಟಿ ರವಿಗೆ ಬಿಗ್ ರಿಲೀಫ್ – ಜಾಮೀನು ನೀಡಿ ತಕ್ಷಣವೇ...

C T Ravi: ಸಿ ಟಿ ರವಿಗೆ ಬಿಗ್ ರಿಲೀಫ್ – ಜಾಮೀನು ನೀಡಿ ತಕ್ಷಣವೇ ರಿಲೀಸ್ ಮಾಡಿ ಎಂದ ಕೋರ್ಟ್

Hindu neighbor gifts plot of land

Hindu neighbour gifts land to Muslim journalist

C T Ravi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಅಶ್ಲೀಲ ಪದ ಬಳಕೆ ಸಂಬಂಧ ದಾಖಲಾಗಿದ್ದಂತ ಎಫ್‌ಐಆರ್ ಹಿನ್ನಲೆಯಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಬಂಧಿಸಲಾಗಿತ್ತು. ಆದರೆ ಸಿಟಿ ರವಿ ಅವರು ಜಾಮೀನಿಗಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯವು, ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಬಿಡುಗಡೆಗೆ ಆದೇಶಿಸಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದ್ರೇ, ಸಿ.ಟಿ ರವಿ(C T Ravi) ಪರವಾಗಿ ಅಶೋಕ್ ಹಾರನಹಳ್ಳಿ ಪ್ರತಿವಾದ ಮಂಡಿಸಿದರು. ವಾದ ಪ್ರತಿ ವಾದಗಳನ್ನು ಆಲಿಸಿದಂತ ನ್ಯಾಯಾಲಯವು, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ತಕ್ಷಣವೇ ಬಿಡುಗಡೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ.