Suvarna Soudha: ಸಿ ಟಿ ರವಿ ನಿಜಕ್ಕೂ ಅಶ್ಲೀಲ ಪದ ಬಳಸಿದರೆ? ಸದನದಲ್ಲಿ ರವಿ ಮತ್ತು ಲಕ್ಷ್ಮೀ ಏನೇನು ಬೈದಾಡಿಕೊಂಡ್ರು? ಇಲ್ಲಿದೆ ನೋಡಿ ವಿಡಿಯೋ

Suvarna Soudha: ಸಂಸತ್​ನಲ್ಲಿ ಬಿ ಆರ್‌ ಅಂಬೇಡ್ಕರ್​ ಅವರ ವಿಚಾವಾಗಿ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಇದು ಆಡಳಿತರೂಢ ಎನ್​ಡಿಎ ಸದಸ್ಯರು ಹಾಗೂ ವಿಪಕ್ಷ ಸದಸ್ಯರ ನಡುವೆ ದೊಡ್ಡ ಮೊಟ್ಟದ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ತೀವ್ರ ನೂಕಾಟ ತಳ್ಳಾಟದಿಂದ ಇಬ್ಬರು ಸಂಸದರ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ.

ರಾಜ್ಯದಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಅಧಿವೇಶನಗಳ ನಡೆಯುತ್ತಿದ್ದು ಇಲ್ಲೂ ಕೂಡ ಇದೇ ವಿಚಾರ ಸದ್ದು ಮಾಡುತ್ತಿದೆ. ಈ ವೇಳೆ ಸದನದಲ್ಲಿ ಶಾಸಕ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದವನ್ನು ಉಪಯೋಗಿಸಿದ್ದಾರೆ ಎನ್ನುವ ಕಾರಣದಿಂದ ಕೋಲಾಹಲ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಸಿ ಟಿ ರವಿಯನ್ನು ಬಂಧಿಸುವ ಮೂಲಕ ನೆನ್ನೆ ರಾತ್ರಿ ಇಡಿ ಹೈಡ್ರಾಮ ನಡೆದಿದೆ. ಹಾಗಿದ್ರೆ ಪರಿಷತ್ತಿನೊಳಗೆ ಸಿಟಿ ರವಿ ಅವರು ಮಾತನಾಡಿದ್ದೇನು, ಅದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೊಟ್ಟ ಪ್ರತಿಕ್ರಿಯೆ ಏನು? ಇಲ್ಲಿದೆ ನೋಡಿ ವಿಡಿಯೋ.

Leave A Reply

Your email address will not be published.