C T Ravi: ಕೋರ್ಟ್ ನಲ್ಲಿ ಗಳ ಗಳನೆ ಅತ್ತ ಸಿಟಿ ರವಿ !! ಸಮಾಧಾನ ಮಾಡಿದ ಬಿಜೆಪಿ ನಾಯಕರು

C T Ravi: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಲ್ಸಿ ಸಿಟಿ ರವಿ ಅವರನ್ನು ಇದೀಗ ಬೆಳಗಾವಿಯ ಜೆಎಂಎಫ್ ಸಿ ಕೋರ್ಟಿಗೆ ಪೊಲೀಸರು ಹಾಜರುಪಡಿಸಿದ್ದಾರೆ. ಆದರೆ ಕೋರ್ಟಲ್ಲಿ ಸಿಟಿ ರವಿ(C T Ravi)ಅವರು ಗಳನೆ ಅತ್ತಿದ್ದಾರೆ.

ಸುವರ್ಣಸೌಧದಲ್ಲಿ ಕಲಾಪದ ಸಂದರ್ಭದಲ್ಲಿ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿಯ ಸದಸ್ಯರು ಕೂಡ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿ ಅವರಿಗೆ ಕೊಲೆಗಡುಕ ಎಂದು ಕರೆದರೆ, ಆ ವೇಳೆ ಸಿಟಿ ರವಿಯವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 75 ಹಾಗೂ 79 ಕಾಯ್ದೆಯ ಅಡಿ FIR ದಾಖಲಾಗಿದ್ದು ಅವರನ್ನು ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕೋರ್ಟ್ ಹಾಲ್ ನಲ್ಲಿ ಸಿಟಿ ರವಿ ಗಳಗಳನೆ ಅತ್ತ ಪ್ರಸಂಗ ನಡೆಯಿತು. ಕಣ್ಣೀರು ಹಾಕಿದ ಸಿ ಟಿ ರವಿ ಅವರಿಗೆ ಬಿಜೆಪಿ ನಾಯಕರು ಸಮಾಧಾನ ಹೇಳಿದರು. ಸಿಟಿ ರವಿಗೆ ವಿಪಕ್ಷ ನಾಯಕ ಆರ್ ಅಶೋಕ ದೈರ್ಯ ತುಂಬಿದರು. ಬಿಜೆಪಿ ನಾಯಕರು ಹಾಗೂ ವಕೀಲರು ನ್ಯಾಯಾಧೀಶರಿಗಾಗಿ ಕಾಯುತ್ತಿದ್ದಾರೆ. ಗಳಗಳನೆ ಅತ್ತ ಸಿಟಿ ರವಿ ಅವರಿಗೆ ಮಹೇಶ್‌ ತೆಂಗಿನ ಕಾಯಿ ಹಾಗೂ ಸುನಿಲ್ ಕುಮಾರ್ ಆತ್ಮಸ್ಥೈರ್ಯ ತುಂಬಿದರು.

Leave A Reply

Your email address will not be published.