France News: ಪತ್ನಿಗೆ ಅಮಲು ಪದಾರ್ಥ ನೀಡಿ 92 ಪುರುಷರಿಂದ ಅತ್ಯಾಚಾರ ಮಾಡಿಸಿದ ಪತಿ
France News: 72 ವರ್ಷದ ಡೊಮಿನಿಕ್ ಪೆಲ್ಲಿಕಾಟ್‌ಗೆ ಫ್ರೆಂಚ್ ಗೆ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತನ್ನ ಮಾಜಿ ಪತ್ನಿ ಜಿಸೆಲ್ ಪೆಲ್ಲಿಕಾಟ್‌ಗೆ (70) ಮಾದಕ ದ್ರವ್ಯ ನೀಡಿ, ಅಪರಿಚಿತರಿಂದ ಅತ್ಯಾಚಾರವೆಸಗುವಂತೆ ಮಾಡಿದ ಆತನಿಗೆ ಶಿಕ್ಷೆ ವಿಧಿಸಲಾಯಿತು. 10 ವರ್ಷಗಳಿಂದ ಈ ತನ್ನ ಹೆಂಡತಿಗೆ ಈ ರೀತಿ ಹಿಂಸೆ ನೀಡಿದ್ದಾನೆ ಈತ. ಇದರಲ್ಲಿ 50 ಇತರ ಪುರುಷರೂ ಅಪರಾಧಿಗಳೆಂದು ಸಾಬೀತಾಗಿದೆ. ಅವರು ವಿವಿಧ ಆರೋಪಗಳಲ್ಲಿ ತಪ್ಪಿತಸ್ಥರು ಎಂದು ಕಂಡುಬಂದಿದೆ.
ಮಹಿಳೆ ತಾನು 10 ವರ್ಷಗಳಿಂದ ಅತ್ಯಾಚಾರ ಸಹಿಸಿರುವುದಾಗಿ ತನ್ನ ಲಾಯರ್ ಆಂಟೊಯಿನ್ ಕ್ಯಾಮುಸ್ ಮೂಲಕ ಹೇಳಿಸಿದ್ದಾರೆ. ಈ ಪತಿ ಮಹಾಶಯ ತನ್ನ ಹೆಂಡತಿಯ ಮೇಲೆ ಅತ್ಯಾಚಾರ ಮಾಡಲು ಅಪರಿಚಿತರನ್ನು ನೇಮಿಸಿಕೊಳ್ಳಲು coco.fr ಎಂಬ ಹೆಸರಿನ ಸೈಟನ್ನು ಬಳಸುತ್ತಿದ್ದ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅತ್ಯಾಚಾರ ಮಾಡುವುದನ್ನು ರೆಕಾರ್ಡ್ ಮಾಡುವುದು, ಪುರುಷರಿಗೆ ನಿಂದನೀಯ ಭಾಷೆ ಬಳಸುವಂತೆ ಈತ ಪ್ರೋತ್ಸಾಹ ನೀಡುತ್ತಿದ್ದನಂತೆ. ಇದೆಲ್ಲ ಮಾಡುವ ಸಂದರ್ಭದಲ್ಲಿ ಆತ ತನ್ನ ಹೆಂಡತಿಗೆ ಅಮಲು ಪದಾರ್ಥ ನೀಡುತ್ತಿದ್ದು, ನಂತರ ವಿಕೃತಿ ಮೆರೆಯುತ್ತಿದ್ದ.
ಗಿಸೆಲ್ ಮತ್ತು ಆಕೆಯ ಮೂವರು ಮಕ್ಕಳ ಸಮ್ಮುಖದಲ್ಲಿ ತೀರ್ಪು ನೀಡಲಾಯಿತು. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ, ಡೊಮಿನಿಕ್ ಮಗಳು ಕ್ಯಾರೊಲಿನ್ ಡೆರಿಯನ್ ತನ್ನ ಕೋಪವನ್ನು ವ್ಯಕ್ತಪಡಿಸಿದ್ದು, ಕೋಪದಿಂದ ತನ್ನ ತಂದೆಗೆ “ನಾಯಿ ಸತ್ತ ಹಾಗೆ ಸಾಯುವೆ ನೀನು” ಎಂದು ಹೇಳಿದ್ದಾಳೆ. ಡೊಮಿನಿಕ್ ತನ್ನ ಅಂತಿಮ ಹೇಳಿಕೆಯಲ್ಲಿ ನನ್ನ ಮಗಳ ಕಣ್ಣುಗಳನ್ನು ನೇರವಾಗಿ ನೋಡಲು ಬಯಸುತ್ತೇನೆ ಮತ್ತು ನಾನು ಏನನ್ನೂ ಮಾಡಿಲ್ಲ ಎಂದು ಹೇಳಲು ಬಯಸುತ್ತೇನೆ (ಅವಳಿಗೆ). ಅವಳು ನನ್ನನ್ನು ಪ್ರೀತಿಸದಿದ್ದರೂ, ನಾನು ಅವಳನ್ನು ಯಾವಾಗಲೂ ಪ್ರೀತಿಸುತ್ತೇನೆ. ನಾನು ಏನು ಮಾಡಿದೆ ಮತ್ತು ನಾನು ಏನು ಮಾಡಿಲ್ಲ ಎಂದು ನನಗೆ ತಿಳಿದಿದೆ ಎಂದು ಹೇಳಿದ್ದಾನೆ.
“ನಾನು ಈ ಹೋರಾಟವನ್ನು ನನ್ನ ಕುಟುಂಬಕ್ಕಾಗಿ ಮತ್ತು ಈ ದುರಂತದಿಂದ ಬಾಧಿತರಾದ ಪ್ರತಿಯೊಬ್ಬರಿಗೂ ಹೋರಾಡಿದೆ” ಎಂದು ಜಿಸೆಲ್ ತನ್ನ ಮೂವರು ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯವನ್ನು ಸೂಚಿಸುತ್ತಾ ನ್ಯಾಯಾಲಯದ ಹೊರಗೆ ಹೇಳಿದರು. ಇದು ಕಠಿಣ ಪರೀಕ್ಷೆಯಾಗಿತ್ತು. ಆದರೆ ಈಗ ನಾವು ಮುಂದುವರಿಯಬೇಕಾಗಿದೆ. ಡೊಮಿನಿಕ್ ಪೆಲ್ಲಿಕೋಟ್ ಜೊತೆಗೆ ಇತರ 50 ಆರೋಪಿಗಳ ವಿಚಾರಣೆ ನಡೆಸಲಾಯಿತು. ಡೊಮಿನಿಕ್ ಪೆಲ್ಲಿಕಾಟ್ ಒಳಗೊಂಡ ಪ್ರಕರಣವು ಫ್ರೆಂಚ್ ನ್ಯಾಯ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಉದಾಹರಣೆಯಾಗಿದೆ. ಈ ಘಟನೆಯು ನ್ಯಾಯ, ಕುಟುಂಬ ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಮತ್ತು ಅಪರಾಧಿಗಳಿಗೆ ಎಚ್ಚರಿಕೆಯಾಗಿದೆ.
ಈ ಐತಿಹಾಸಿಕ ನಿರ್ಧಾರದ ನಂತರ ಫ್ರಾನ್ಸ್ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದ ಪ್ರತಿಭಟನೆಗಳೂ ನಡೆದಿದ್ದವು.