Suvarna Soudha: ಅಶ್ಲೀಲ ಪದ ಬಳಕೆ ಆರೋಪ- ಸುವರ್ಣ ಸೌಧದೊಳಗೆ ನುಗ್ಗಿ ಸಿ.ಟಿ. ರವಿಗೆ ಕಾಲಿಂದ ಒದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಹಲ್ಲೆ !!

Suvarna Soudha: ರಾಜ್ಯದಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಅಧಿವೇಶನಗಳ ನಡೆಯುತ್ತಿದ್ದು ಈ ವೇಳೆ ಸದನದಲ್ಲಿ ಶಾಸಕ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದವನ್ನು ಉಪಯೋಗಿಸಿದ್ದಾರೆ ಎನ್ನುವ ಕಾರಣದಿಂದ ಕೋಲಾಹಲ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಸುವರ್ಣ ಸೌಧದೊಳಗೆ(Suvarna Soudha) ನುಗ್ಗಿದ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar ಬೆಂಬಲಿಗರು ಸಿಟಿ ರವಿ(C T Ravi)ಮೇಲೆ ಹಲ್ಲೆ ಮಾಡಿದ್ದಾರೆ.

 

ಹೌದು, ಸಂಸತ್​ನಲ್ಲಿ ಬಿ ಆರ್‌ ಅಂಬೇಡ್ಕರ್​ ಅವರ ವಿಚಾವಾಗಿ ಆಡಳಿತರೂಢ ಎನ್​ಡಿಎ ಸದಸ್ಯರು ಹಾಗೂ ವಿಪಕ್ಷ ಸದಸ್ಯರ ನಡುವೆ ದೊಡ್ಡ ಮೊಟ್ಟದ ಆರೋಪ ಪ್ರತ್ಯಾರೋಪವಾಗಿದ್ದು ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ತೀವ್ರ ನೂಕಾಟ ತಳ್ಳಾಟವಾಗಿದೆ. ಇತ್ತ ಕರ್ನಾಟಕ ವಿಧಾನಪರಿಷತ್ ಚಳಿಗಾಲದ ಅಧಿವೇಶನದಲ್ಲೂ ಇದೇ ವಿಚಾರ ಪ್ರತಿಧ್ವನಿಸಿದೆ. ಈ ಕುರಿತು ಪರಸ್ಪರ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅಶ್ಲೀಲ ಪದದಿಂದ ಬೈದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸದನದ ಹೊರಗೆ ಹಾಗೂ ಒಳಗೆ ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಯಾಗಿದೆ. ಈ ಆರೋಪದ ಬೆನ್ನಲ್ಲಿಯೇ ಸುವರ್ಣ ಸೌಧದೊಳಗೆ ನುಗ್ಗಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿಟಿ ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಹುಚ್ಚ ಸಿಟಿ ರವಿ ಹೊರಗೆ ಬಾ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

 

ಇದು ಸುವರ್ಣ ಸೌಧದಲ್ಲಿ ಭಾರೀ ಭದ್ರತಾ ಲೋಪ ಉಂಟಾಗಿದೆ ಎಂಬುದನ್ನು ತೋರಿಸಿದೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರು ಎರಡನೇ ಬಾರಿಗೆ ಹಲ್ಲೆಗೆ ಯತ್ನ ಮಾಡಿದ್ದಾರೆ. ಸುರ್ಣ ಸೌಧದ ವಿಐಪಿ ಗೇಟಿನ ಬಳಿ ಕಾರಿನಿಂದ ಇಳಿದಾಗ ಹಲ್ಲೆ ಯತ್ನದಿಂದ ತಪ್ಪಿಸಿಕೊಂಡು ಒಳಗೆ ಹೋದ ಸಿ.ಟಿ. ರವಿ ಅವರು ಒಳಗೆ ಹೋಗಿದ್ದಾರೆ. ನಂತರ, ಒಳಗೆ ಸೆಕ್ಯೂರಿಟಿ ಬಾಗಿಲಿನಿಂದ ಒಳಗೆ ಹೋಗುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕ ಹಾಗೂ ಲಕ್ಷ್ಮೀ ಅವರ ಸಹೋದರ ಚನ್ನರಾಜ್ ಅವರ ಆಪ್ತನಿಂದ ಸಿ.ಟಿ. ರವಿ ಮೇಲೆ ಹಲ್ಲೆ ಮಾಡಲಾಗಿದೆ.

https://youtu.be/HhAbyi_u8Kw?si=dSxcLoUap9PQ6Q_m

 

ಅಲ್ಲದೆ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ಹಾಗೂ ಅವರ ಸಹೋದರ ಚೆನ್ನರಾಜ್ ಪಿಎ ಸದ್ದಾಂ ಅವರಿಂದ ಹಲ್ಲೆ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ತಡೆಯಲು ಬಂದರೂ ರವಿ ಅವರ ಮೇಲೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಇದಾದ ನಂತರ ರವಿ ಅವರನ್ನು ಗೇಟಿನ ಒಳಗೆ ಕರೆದೊಯ್ದು ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

Leave A Reply

Your email address will not be published.