Sanjay Singh: ದರ್ಶನ್ ಮತ್ತು ಪವಿತ್ರ ಗೌಡ ನಡುವಿನ ಸಂಬಂಧ ಏನು? ಕೊನೆಗೂ ನಿಜ ಸಂಗತಿ ಬಿಚ್ಚಿಟ್ಟ ಪವಿತ್ರಳ ಮಾಜಿ ಪತಿ!!
Sanjay Singh: ರೇಣುಕಾ ಸ್ವಾಮಿ ಕೊಲೆ ಪ್ರಕರಣದಡಿ ಆರೋಪಿಗಳಾಗಿ ಜೈಲು ಸೇರಿದ್ದ ಡಿ ಗ್ಯಾಂಗ್ ಗೆ ಜಾಮೀನು ಸಿಕ್ಕಿದೆ. ಇದರಲ್ಲಿ ಪವಿತ್ರ ಗೌಡ ಕೂಡ ಒಬ್ಬರಾಗಿದ್ದು ಅವರು ಕೂಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ ಪವಿತ್ರ ಗೌಡರ ಮಾಜಿ ಪತಿ ಸಂಜಯ್ ಸಿಂಗ್ ಪ್ರತ್ಯಕ್ಷ ಆಗಿದ್ದು ಕೆಲ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಂತೀಯ ದರ್ಶನ್ ಮತ್ತು ಪವಿತ್ರ ಗೌಡ ನಡುವಿನ ಸಂಬಂಧದ ಕುರಿತು ಅವರು ಮಾತನಾಡಿದ್ದಾರೆ.
ಪವಿತ್ರಾ ಗೌಡ ಜೊತೆಗಿನ ದರ್ಶನ್ ಆತ್ಮೀಯ ಫೋಟೊಗಳು ಹಾಗೂ ವಿಜಯಲಕ್ಷ್ಮಿ ಪೋಸ್ಟ್ಗೆ ಪವಿತ್ರಾ ಗೌಡ ಪ್ರತಿಕ್ರಿಯೆ ನೀಡಿದ್ದ ಪೋಸ್ಟ್ ಬಗ್ಗೆಯೂ ಸಂಜಯ್ ಸಿಂಗ್ ಮಾತನಾಡಿದ್ದಾರೆ. “ಅವರಿಬ್ಬರು ಕಲಾವಿದರು. ಇಬ್ಬರು ಕಲಾವಿದರ ಫೋಟೊ ತೋರಿಸಿದರೆ ನಿಮಗೆ ಸಿನಿಮಾ ಎನಿಸುತ್ತಾ? ಆತ್ಮೀಯತೆ ಎನ್ನುತ್ತೀರಾ?” ಎಂದು ಪವಿತ್ರಾ ಗೌಡ ಮಾಜಿ ಪತಿ ಪ್ರಶ್ನಿಸಿದ್ದಾರೆ.
“ದರ್ಶನ್ ಜೊತೆಗಿನ ಲಿವ್ ಇನ್ ರಿಲೇಷನ್ಶಿಪ್ ಬಗ್ಗೆ ಪವಿತ್ರಾ ಗೌಡ ಪೋಸ್ಟ್ ಮಾಡಿ ಸ್ಪಷ್ಟನೆ ಕೊಟ್ಟ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡಲ್ಲ. ಆಕೆ ತನ್ನ ಫೀಲಿಂಗ್ಸ್ ಶೇರ್ ಮಾಡಿಕೊಂಡಿರಬಹುದು. ಖುಷಿ ನನ್ನ ಮಗಳು ಎಂದು ಪವಿತ್ರಾ ಹೇಳಿದ್ದು ನನಗೆ ಖುಷಿ ತಂದಿದೆ. ಪವಿತ್ರಾ ಎಲ್ಲದೇ ಇದ್ದರೂ ಖುಷಿಯಾಗಿರಲಿ, ಆಕೆ ವಾಪಸ್ ಬರುವ ವಿಶ್ವಾಸ ಇಲ್ಲ, ಆದರೆ ನನ್ನ ಜೀವನ ಆಕೆಗಾಗಿಯೇ ” ಎಂದು ತಿಳಿಸಿದ್ದಾರೆ.
ಅಲ್ಲದೆ “ದರ್ಶನ್ ಹಾಗೂ ಪವಿತ್ರಾ ಗೌಡ ನನ್ನ ಪ್ರಕಾರ ಬಹಳ ಆತ್ಮೀಯ ಸ್ನೇಹಿತರು. ಒಬ್ಬರ ಬಗ್ಗೆ ಮತ್ತೊಬ್ಬರು ಬಹಳ ಕೇರ್ ತೆಗೆದುಕೊಳ್ಳುತ್ತಾರೆ. ಅದು ಬಿಟ್ಟರೆ ನನಗೆ ಬೇರೇನು ಗೊತ್ತಿಲ್ಲ. ಆತ್ಮೀಯ ಸ್ನೇಹಿತರಿಗೆ ತೊಂದರೆ ಕೊಟ್ಟರೆ ಜೊತೆ ನಿಲ್ಲುತ್ತೇವೆ. ಅದೇ ರೀತಿ ಪವಿತ್ರಾ ಗೌಡಗೆ ನೋವಾದಾಗ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ ಅಷ್ಟೇ. ಆದರೆ ರೇಣುಕಾಸ್ವಾಮಿ ವಿಚಾರದಲ್ಲಿ ಅದು ಒಂದು ಹೆಜ್ಜೆ ಮುಂದೆ ಹೋಗಿದೆ” ಎಂದು ಅವನಿಯಾನ ಯೂಟ್ಯೂಬ್ ಸಂದರ್ಶನದಲ್ಲಿ ಸಂಜಯ್ ಸಿಂಗ್ ಹೇಳಿದ್ದಾರೆ.