Belthangady: ಮಸೀದಿಯ ಧರ್ಮಗುರುವಿನ ಮೇಲೆ ಹಲ್ಲೆ

Belthangady: ಜುಮ್ಮಾ ಮಸೀದಿಯ ಧರ್ಮಗುರುವಿನ ಮೇಲೆ ತಂಡವೊಂದು ಹಲ್ಲೆ ಮಾಡಿದ ಘಟನೆಯೊಂದು ಮಂಗಳವಾರ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಸುಮಾರು 12 ಜನರ ತಂಡವು ಚಾರ್ಮಾಡಿಯ ಮುಹಿದ್ದಿನ್‌ ಜುಮ್ಮಾ ಮಸೀದಿಯ ಧರ್ಮಗುರುವಿನ ಮೇಲೆ ಮಂಗಳವಾರ ರಾತ್ರಿ ನುಗ್ಗಿ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಧರ್ಮಗುರು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗೂ ಚಿಕಿತ್ಸೆ ಮುಂದುವರಿದಿದೆ.

ಚಾರ್ಮಾಡಿ ಗ್ರಾಮದ ಮುಹಿದ್ದಿನ್ ಜುಮ್ಮಾ ಮಸೀದಿ ಜಾಲಲಿನಗರದ ಧರ್ಮಗುರು ಶಮೀರ್ ಮುಸ್ಲಿಯಾರ್ (37) ಎಂಬುವವರೇ ಹಲ್ಲೆಗೊಳಗಾದವರು.

ಸ್ಥಳೀಯರಾದ ಬದ್ರುದ್ದಿನ್,ಸಂಶುದ್ದಿನ್, ಅಹಮದ್ ಟಿಬಿ ರೋಡ್, ನೌಫಲ್ ,ಅನ್ಸರ್, ಮುನೀರ್ ಅಸೀಫ್,ಅಫೀಝ್,ಅಫ್ರೀಜ್, ಶರೀಫ್,ಅಬ್ದುಲ್ ಖಾದರ್ ಸೇರಿ ಇತರರು ಮಸೀದಿಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಹಲ್ಲೆ ಬಳಿಕ ಮಸೀದಿ ಆವರಣದಲ್ಲಿ ಹಲ್ಲೆ ಮಾಡಿದ ತಂಡದವರು ಮತ್ತು ಮಸೀದಿಯವರ ಜತೆ ಗಲಾಟೆ ನಡೆದಿದ್ದು, ಈ ಘಟನೆಯ ಬಗ್ಗೆ ವಿಡಿಯೋ ವೈರಲ್ ಅಗಿದೆ.

ಘಟನೆ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಗೆ ಧರ್ಮಗುರು ದೂರು ನೀಡಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.