Parliament : ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ – ಬಹುಮತ ಪಡೆಯುವಲ್ಲಿ ವಿಫಲ !!
Parliament : ಲೋಕಸಭೆಯಲ್ಲಿ ಇಂದು ‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಯನ್ನು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಗಳವಾರ ಲೋಕಸಭೆಯಲ್ಲಿ(Parliament) ಮಂಡಿಸಿದ್ದಾರೆ. ಆದರೆ ಲೋಕಸಭೆಯಲ್ಲಿ ಈ ಮಸೂದೆಯು ಬಹುಮತ ಗಳಿಸುವಲ್ಲಿ ವಿಫಲವಾಗಿದೆ.
ಮಸೂದೆ ಮಂಡನೆಗೆ ಮುನ್ನ ಪ್ರತಿಪಕ್ಷಗಳು ಮತ ವಿಭಜನೆಯನ್ನು ಕೋರಿದ್ದವು. ಹೀಗಾಗಿ ನೂತನ ಸಂಸತ್ ಕಟ್ಟಡದಲ್ಲಿ ಲೋಕಸಭೆಯಲ್ಲಿ ಪ್ರಥಮ ಬಾರಿಗೆ ವಿದ್ಯುನ್ಮಾನ ಮತದಾನ ವ್ಯವಸ್ಥೆಯನ್ನು ಬಳಸಲಾಯಿತು. ಮಸೂದೆಗಳ ಪರವಾಗಿ 269 ಮತ್ತು ವಿರುದ್ಧವಾಗಿ 198 ಮತಗಳು ಚಲಾವಣೆಗೊಂಡವು. ಆದರೆ ಮಸೂದೆಗಳು ಕೆಳಮನೆಯಲ್ಲಿ ಅಗತ್ಯ ಮೂರನೇ ಎರಡರಷ್ಟು ಬಹುಮತವನ್ನು ಗಳಿಸುವಲ್ಲಿ ವಿಫಲಗೊಂಡವು.
ಹೌದು, ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು 235 ಸಂಸದರನ್ನು ಹೊಂದಿದೆ. ಪ್ರಸ್ತುತ ಲೋಕಸಭೆಯು 542 ಸದಸ್ಯರು ಮತ್ತು ಒಂದು ಖಾಲಿ ಸ್ಥಾನವನ್ನು ಹೊಂದಿದೆ. ಎನ್ಡಿಎ ಲೋಕಸಭೆಯಲ್ಲಿ ಸುಮಾರು 293 ಸಂಸದರನ್ನು ಹೊಂದಿದ್ದು. ಮಸೂದೆಯ ಅಂಗೀಕಾರಕ್ಕೆ ಮೂರನೇ ಎರಡರಷ್ಟು, ಅಂದರೆ 361 ಸದಸ್ಯರ ಬೆಂಬಲ ಅಗತ್ಯವಿದೆ. ಆದರೆ ಅಷ್ಟು ಮತ ಸಿಗದಾಗಿದೆ.