5 Rupee Coin Ban: ಇನ್ಮುಂದೆ 5 ರೂಪಾಯಿ ಕಾಯಿನ್ ಬ್ಯಾನ್ ?!ನಮ್ಮಲ್ಲಿರುವ ನಾಣ್ಯಗಳನ್ನು ಏನು ಮಾಡಬೇಕು?
5 Rupee Coin Ban: ಭಾರತೀಯ ರಿಸರ್ವ್ ಬ್ಯಾಂಕ್ (RBI) 5 ರೂಪಾಯಿಯ ನಾಣ್ಯಗಳನ್ನು ರದ್ದು( 5 Rupe Coin Ban) ಮಾಡಲು ಮುಂದಾಗಿದೆಯಂತೆ. ಈ ಕುರಿತು ಮಾಧ್ಯಮ ವರದಿಗಳು ಹರಿದಾಡುತ್ತಿವೆ. ಈ ಕುರಿತು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಹೌದು, ಒಂದು ವರ್ಷದಲ್ಲಿ ಎಷ್ಟು ನಾಣ್ಯಗಳನ್ನು ಮುದ್ರಿಸಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಇದರ ನಂತರ, ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ನಿರ್ದೇಶಿಸುತ್ತದೆ. ತದನಂತರ ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳನ್ನು ಮುದ್ರಿಸುತ್ತದೆ. ಇದರ ನಡುವೆ 5 ರೂ. ನಾಣ್ಯ ಇನ್ನು ಮುಂದೆ ಚಲಾವಣೆಯಲ್ಲಿ ಇರುವುದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಅಲ್ಲದೆ ಕೆಲವು ವರದಿಗಳ ಪ್ರಕಾರ ಈ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ. ಇನ್ನೂ ಕೆಲ ವರದಿಗಳ ಪ್ರಕಾರ ಈ ನಾಣ್ಯಗಳ ತಯಾರಿಕೆಯನ್ನು ಸರ್ಕಾರ ನಿಲ್ಲಿಸಿದೆ ಎನ್ನಲಾಗದೆ. ಅದರ ಚಲಾವಣೆ ಮುಂದುವರಿಯಲು ಅಡ್ಡಿ ಇಲ್ಲ ಎನ್ನಲಾಗಿದೆ. ಅದರ ಚಲಾವಣೆಯನ್ನೂ ನಿಲ್ಲಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆರ್ಬಿಐ ಅಧಿಕೃತ ಹೇಳಿಕೆ ಬಂದಿಲ್ಲ.
ಯಾವ ರೀತಿ ನಾಣ್ಯ ಬಂದ್?
ಸಧ್ಯ ಭಾರತದಲ್ಲಿ ಮೂರು ರೀತಿಯ 5 ರೂ ನಾಣ್ಯಗಳು ಚಲಾವಣೆಯಲ್ಲಿವೆ. ಗೋಲ್ಡ್ ಕಾಯಿನ್ ಎಂದು ಜನಪ್ರಿಯವಾಗಿರುವ, ನಿಕಲ್ ಮತ್ತು ಬ್ರಾಸ್ನಿಂದ (ಹಿತ್ತಾಳೆ) ಮಾಡಿರುವ 5 ರೂ ನಾಣ್ಯ ಇದೆ. ಹೆಚ್ಚು ವ್ಯಾಸವಿರುವ ಅದೇ ಲೋಹಗಳಿಂದ ಮಾಡಿದ ನಾಣ್ಯವೂ ಇದೆ. ಹಿಂದೆ ತಯಾರಿಸಿ ಮಾರುಕಟ್ಟೆಗೆ ಬಿಡಲಾಗಿದ್ದ ದಪ್ಪದಾಗಿರುವ 5 ರೂ ನಾಣ್ಯವೂ ಚಲಾವಣೆಯಲ್ಲಿದೆ. ಇಷ್ಟು ವಿಧವಾದ 5 ರೂಪಾಯಿ ನಾಣ್ಯಗಳ ಪೈಕಿ ದಪ್ಪದಾಗಿರುವ 5 ರೂಪಾಯಿ ನಾಣ್ಯದ ತಯಾರಿಕೆಯನ್ನು ಆರ್ಬಿಐ ನಿಲ್ಲಿಸಿದೆ. ಒಟ್ಟಿನಲ್ಲಿ ಆರ್ಬಿಐ ಕುರಿತು ಮಹತ್ವದ ಪ್ರಕಟಣೆಯನ್ನು ನೀಡಬೇಕಿದೆ.