Mumbai: ಕೆಲಸ ಮಾಡುವಾಗ ಗ್ರೈಂಡರ್ ಗೆ ಸಿಲುಕಿದ ಕೈ, ಕ್ಷಣಾರ್ಧದಲ್ಲಿ ಯುವಕನ ದೇಹ ಛಿದ್ರ ಛಿದ್ರ!! ಭಯಾನಕ ವಿಡಿಯೋ ವೈರಲ್

Mumbai: ನಾವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಎಷ್ಟೇ ಜಾಗೃತೆಯಿಂದ ಇದ್ದರೂ ಕೂಡ ಕೆಲವೊಮ್ಮೆ ಆಚಾತುರ್ಯಗಳು ಸಂಭವಿಸಿಬಿಡುತ್ತವೆ. ಒಮ್ಮೊಮ್ಮೆ ಆ ಚಾತುರ್ಯಗಳು ನಮ್ಮ ಜೀವವನ್ನೇ ತೆಗೆದುಬಿಡುತ್ತವೆ. ಇದೀಗ ಇಂಥದ್ದೇ ಒಂದು ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋ ವೈರಲ್ ಆಗಿ ನೋಡುಗರ ಮೈ ನಡುಗಿಸಿ ಬಿಡುತ್ತದೆ.

ಅದೇನೆಂದರೆ ಗ್ರೈಂಡರ್ ಬಳಿ ಕೆಲಸ ಮಾಡುವ ವೇಳೆ ಗ್ರೈಂಡರ್ ಒಳಗೆ ಕೈ ಸಿಲುಕಿ 19 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮುಂಬೈನ ವರ್ಲಿಯ ಆದರ್ಶ್ ನಗರದಲ್ಲಿ ನಡೆದಿದೆ.

ಹೌದು, ಮುಂಬೈ(Mumbai) ನಗರದಲ್ಲಿ ಇಂತಹ ಒಂದು ಅಚಾತುರ್ಯ ನಡೆದುಬಿಟ್ಟಿದೆ. ಈ ಅಚತುರ್ಯ ಯುವಕನ ಪ್ರಾಣವನ್ನೇ ತೆಗೆದಿದೆ. ಅಂದಹಾಗೆ ಜಾರ್ಖಂಡ್ ಮೂಲದ ಸೂರಜ್ ನಾರಾಯಣ್ ಯಾದವ್ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಚಿನ್ ಕೊಥೇಕರ್ (32) ಒಡೆತನದ ರಸ್ತೆಬದಿಯ ಚೈನೀಸ್ ಫುಡ್ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದರು. ಯಾದವ್ ಅವರು ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದಿದ್ದು, ಗ್ರೈಂಡರ್ ಅವರನ್ನು ಒಳಗೆ ಎಳೆದುಕೊಂಡಿದೆ. ಘಟನೆಯ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಾದರ್ ಪೊಲೀಸರು ಕೊಥೇಕರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Leave A Reply

Your email address will not be published.