Sulia : ವಾಟ್ಸಪ್ ಸ್ಟೇಟಸ್ ಹಾಕಿ ನೇಣು ತೆಗೆದುಕೊಂಡ ಯುವಕ – ಸ್ಟೇಟಸ್ ಅಲ್ಲಿ ಇರುವುದೇನು?
Sulia : ಮಂಡೆಕೋಲು ಗ್ರಾಮದ ಶಿವಾಜಿನಗರ ಯುವಕ ವಾಟ್ಸಪ್ ಸ್ಟೇಟಸ್ ಒಂದನ್ನು ಹಾಕಿ ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ(Sulia) ತಾಲೂಕಿನ ಮಂಡೆಕೋಲು ಗ್ರಾಮದ ಶಿವಾಜಿನಗರ ಯುವಕ ಪುರುಷೋತ್ತಮ್ (30) ಅವರು ನೇಣು ತೆಗೆದುಕೊಂಡ ಆತ್ಮಹತ್ಯೆ ಮಾಡಿಕೊಂಡ ಯುವಕ. ಪುರುಷೋತ್ತಮ್ ಆತ್ಮಹತ್ಯೆ ಮಾಡುವ ಮುನ್ನ ವಾಟ್ಸಾಪ್ ನಲ್ಲಿ ‘ ಓಂ ಶಾಂತಿ ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳು ಅಣ್ಣ’ ಎಂದು ಸ್ಟೇಟಸ್ ಹಾಕಿದ್ದಾರೆ. ಬಳಿಕ ತಮ್ಮ ಮನೆಯ ಸಮೀಪ ಇರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುರುಷೋತ್ತವ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರ ಮಕ್ಕಳನ್ನ ಪುರುಷೋತ್ತಮ್ ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.