Pavitra Gowda; ಜೈಲಿನಿಂದ ರಿಲೀಸ್‌ ಆಗುತ್ತಿದ್ದಂತೆ ದೇವರ ಮುಂದೆ ಪವಿತ್ರಾ ಗೌಡ ತೀರ್ಥಸ್ನಾನ; ನಟ ದರ್ಶನ್‌ ಹೆಸರಲ್ಲಿ ಅರ್ಚನೆ

Share the Article

Pavitra Gowda; ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾ ಗೌಡ ರಿಲೀಸ್‌ ಆಗುತ್ತಿದ್ದಂತೆ ನೇರ ತಲಘಟ್ಟಪುರದ ವಜ್ರಮುನೇಶ್ವರ ದೇವಾಲಯಕ್ಕೆ ತೆರಳಿದ್ದು ಅಲ್ಲಿ ಪವಿತ್ರಾ ತೀರ್ಥಸ್ನಾನ ಮಾಡಿದ್ದಾರೆ.

ಕನಕಪುರ ರಸ್ತೆಯ ತಲಘಟ್ಟಪುರದ ವಜ್ರಮುನೇಶ್ವರ ದೇವಾಲಯ ಪವಿತ್ರಾ ಗೌಡ ಅವರ ತಾಯಿಯ ಮನೆ ದೇವರು. ಹಾಗಾಗಿ ಪವಿತ್ರಾ ಗೌಡ ತಾಯಿ ಮೊದಲಿಗೆ ಜೈಲಿನ ಆವರಣದಲ್ಲಿರುವ ಮುನೇಶ್ವರನಿಗೆ ಪೂಜೆ ಸಲ್ಲಿಸಿದ್ದು, ನಂತರ ಪವಿತ್ರಾ ಗೌಡ ಜೊತೆ ನೇರ ತಲಘಟ್ಟಪುರದ ವಜ್ರಮುನೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಅಲ್ಲಿ ದೇವಾಲಯದ ಮುಂದೆ ಪವಿತ್ರಾ ಗೌಡ ತೀರ್ಥಸ್ನಾನ ಮಾಡಿದ್ದು, ದೇವರಿಗೆ ಹೂವು, ಕಾಯಿ, ಅಗರಬತ್ತಿ, ನಿಂಬೆಹಣ್ಣು ಸಹಿತ ಪೂಜೆ ಮಾಡಲಾಗಿದೆ. ಅರ್ಚನೆ ಸಮಯದಲ್ಲಿ ಕುಟುಂಬದ ಹೆಸರು, ದರ್ಶನ್‌ ಹೆಸರನ್ನು ಕೂಡಾ ಪೂಜಾರಿಗಳಿಗೆ ಹೇಳಲಾಗಿದೆ.

Leave A Reply