Basavanagouda Patil Yatnal : ವಕ್ಫ್ ಆಸ್ತಿ ಕಬಳಿಕೆ, 150 ಕೋಟಿ ಆಮಿಷ ಆರೋಪ ವಿಚಾರ – ಕೊನೆಗೂ ವಿಜಯೇಂದ್ರ ಬೆನ್ನಿಗೆ ನಿಂತ ಯತ್ನಾಳ್!
![](https://hosakannada.com/wp-content/uploads/2024/12/5019ef78-ae41-46c0-bd3c-1d7530037cb0.jpeg)
Basavanagouda Patil Yatnal: ವಕ್ಫ್ ಆಸ್ತಿ ಕಬಳಿಕೆ ವಿಚಾರವಾಗಿ ಬಿ.ವೈ ವಿಜಯೇಂದ್ರ (BY Vijayendra) ವಿರುದ್ಧ ಕಾಂಗ್ರೆಸ್ (Congress) ಮಾಡಿರು 150 ಕೋಟಿ ಆಫರ್ ವಿಚಾರಕ್ಕೆ ಸಂಬಂಧಿಸಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಯಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬೆನ್ನಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagouda Patil Yatnal) ನಿಂತಿದ್ದಾರೆ.
ಬಿವೈ ವಿಜಯೇಂದ್ರ ಹಾಗೂ ಯತ್ನಾಳ್ ಅವರ ನಡುವೆ ಅಸಮಾಧಾನಗಳಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಜಯೇಂದ್ರ ಅವರು ಏನೇ ಮಾಡಿದರು ಕೂಡ ಯತ್ನಾಳ್ ಅವರು ಇದುವರೆಗೂ ಒಪ್ಪುತ್ತಿರಲಿಲ್ಲ. ಆದರಿಗ ಅಚ್ಚರಿ ಎಂಬಂತೆ 150 ಕೋಟಿ ಆಮಿಷ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಯತ್ನಾಳ್ ಅವರು ವಿಜೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್, ಕರ್ನಾಟಕ ಮುಖ್ಯಮಂತ್ರಿಗಳು ಯಾರದ್ದೋ ಮಾತುಕೇಳಿ ಮಾತನಾಡುವುದು ಸರಿ ಅಲ್ಲ. ಅದೇ ಅನ್ವರ್ ಮಾನಿಪಾಡ್ಡಿ ಬಿಜೆಪಿಯವರು ನನ್ನ ಸಂಪರ್ಕ ಮಾಡಿಲ್ಲ ಅಂತಾ ಹೇಳ್ತಾರೆ. ಜವಾಬ್ದಾರಿ ಸಿಎಂ ಆರೋಪ ಮಾಡಬೇಕಾದರೆ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಸಿಬಿಐ, ಇಡಿಗೆ ನೀವು ಬಿಜೆಪಿಯ ಏಜೆಂಟ್ ಎನ್ನುತ್ತೀರಿ. ಈಗ ಯಾಕೆ ಸಿಬಿಐ ಮತ್ತು ಇಡಿ ಮೇಲೆ ನಂಬಿಕೆ ಬಂದಿದೆ? ಪ್ರಧಾನ ಮಂತ್ರಿಗಳಿಗೆ ಈಗ ಯಾಕೆ ಪತ್ರ ಬರೆಯುತ್ತೀರಿ? ಸಮಸ್ಯೆಯನ್ನ ಕ್ಯಾಬಿನೆಟ್‌ನಲ್ಲಿ ಇಡಿ, ಶಿಫಾರಸು ಮಾಡಿ ಸಿಬಿಐ ತಾನೆ ತನಿಖೆ ಮಾಡುತ್ತಾರೆ. ನಿಮಗೆ ಸಿಬಿಐ ಬಗ್ಗೆ ಈಗ ಯಾಕೆ ವಿಶ್ವಾಸ ಬಂದಿದೆ ಎಂದು ಯತ್ನಾಳ ಸಿಎಂಗೆ ಪ್ರಶ್ನೆ ಹಾಕಿದ್ದಾರೆ. ನಾನು ಆರೋಪ ಮಾಡಿದಾಗ ಇಷ್ಟು ಹಣ ಹಗರಣ ಆಗಿದೆ ಎಂದು ನಮ್ಮ ಗಮನಕ್ಕೆ ಇಲ್ಲ ಎನ್ನುತ್ತಿದ್ದೀರಿ. ಎಚ್ ಕೆ.ಪಾಟೀಲ, ರಾಮಲಿಂಗಾರೆಡ್ಡಿ ಸಮಿತಿ ಅಧ್ಯಕ್ಷರಾಗಿದ್ದರು. ಸಂವಿಧಾನಿಕ ಹುದ್ದೆಯಲ್ಲಿರೋ ಮುಖ್ಯಮಂತ್ರಿ ಸುಳ್ಳು ಸುಳ್ಳ ಆರೋಪವನ್ನು ಮಾಡಬಾರದು. ಸಿಎಂ ಸಿದ್ದರಾಮಯ್ಯ ಸಣ್ಣ ಹುಡುಗರ ಮಾತು ಕೇಳುತ್ತಾರೆ. ಸಚಿವ ಪ್ರಿಯಾಂಕಾ ಖರ್ಗೆ ಹಾಗೂ ಕೃಷ್ಣಬೈರೆಗೌಡರು ಸಣ್ಣ ಹುಡುಗರು. ಇನ್ನು ಇವರ ಮಾತು ಕೇಳಿ ಸಿಎಂ ಹಾದಿಬಿಡುತ್ತಿದ್ದಾರೆ.