Central Government : ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆಯಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದ ಕೇಂದ್ರ – ಭಾರಿ ಕುತೂಹಲ ಕೆರಳಿಸಿದ ಮೋದಿ ಸರ್ಕಾರದ ನಡೆ !!

Central Government : ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯು ಕೇಂದ್ರ ಸರ್ಕಾರದ(Central Government)ಕನಸಿನ ಕೂಸು. ಈ ಮಸೂದೆಯನ್ನು ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಜಾರಿಗೆ ತರಬೇಕೆಂಬುದು ಮೋದಿ ಸರ್ಕಾರದ ಆಸೆಯಾಗಿತ್ತು. ಹೀಗಾಗಿ ಇಂದು ಸೋಮವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸುವುದಾಗಿ ಮೋದಿ ಸರ್ಕಾರ ತಿಳಿಸಿತ್ತು. ಆದರಿಗ ಅಚ್ಚರಿ ಎಂಬಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಕೆಲವೇ ಗಂಟೆಗಳಲ್ಲಿ ತನ್ನ ಈ ನಿರ್ಧಾರವನ್ನು ಹಿಂಪಡೆದು ಅಚ್ಚರಿ ಮೂಡಿಸಿದೆ.

ಒಂದು ರಾಷ್ಟ್ರ, ಒಂದು ಚುನಾವಣೆ’ ( one Nation one election) ಕುರಿತು ಚರ್ಚೆಗಳು ಆರಂಭವಾಗಿದೆ. ಇದಕ್ಕೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡನೆ ಮಾಡಲಾಗುತ್ತದೆ ಇಂದು ಕೇಂದ್ರ ಸರ್ಕಾರ ಹೇಳಿತ್ತು. ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಚರ್ಚೆಗಳು ಆರಂಭವಾಗಿದೆ. ಇದಕ್ಕೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಆದರೆ ಸೋಮವಾರ ಈ ಕುರಿತ ಮಸೂದೆ ಮಂಡನೆ ಮಾಡುವುದಿಲ್ಲ ಎಂದು ಮೋದಿ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿದೆ ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸೋಮವಾರದ ಲೋಕಸಭೆ ಕಲಾಪದ ಪಟ್ಟಿಯಲ್ಲಿ ಈ ಮಸೂದೆ ಮಂಡನೆ ಮಾಡುವ ಕುರಿತು ಪಟ್ಟಿಯನ್ನು ತಯಾರು ಮಾಡಲಾಗಿತ್ತು. ಈಗಾಗಲೇ ಸರ್ಕಾರ ಕರಡು ಮಸೂದೆಯ ಪ್ರತಿಯನ್ನು ಸಂಸದರಿಗೆ ನೀಡಿದ್ದ, ಅವರಿಗೆ ಅಧ್ಯಯನ ಮಾಡಲು ಸಹ ಸೂಚನೆ ನೀಡಿದೆ. ಆದರೆ ಭಾನುವಾರ ಸಿಕ್ಕಿರುವ ಲೋಕಸಭೆಯ ಡಿಸೆಂಬರ್ 16, ಸೋಮವಾರದ ಕಲಾಪದ ಪಟ್ಟಿಯಲ್ಲಿ ಕೆಲವು ಬದಲಾವಣೆಯಾಗಿದೆ. ಲೋಕಸಭೆ ಕಲಾಪದ ಪಟ್ಟಿಯಿಂದ ದಿಢೀರ್ ಎಂದು ಇದಕ್ಕೆ ಸಂಬಂಧಿಸಿದ ಮಸೂದೆಗಳನ್ನು ಕೈಬಿಡಲಾಗಿದೆ. ಹೀಗಾಗಿ ಪ್ರಸಕ್ತ ಅಧಿವೇಶನದಲ್ಲಿ ಈ ಮಸೂದೆ ಮಂಡನೆ ಆಗುತ್ತಾ ಆಗಲ್ವಾ ಎಂಬ ಬಗ್ಗೆ ಸದ್ಯ ಸಂದಿಗ್ಧತೆ ನೆಲೆಸಿದೆ.

ಇನ್ನು ಮೊದಲಿಗೆ ಪೂರಕ ಬೇಡಿಕೆಗಳ ಕುರಿತ ಅನುದಾನಕ್ಕೆ ಸಂಬಂಧಿಸಿದ ವಿಷಯಗಳಿಗೆ ಅನುಮೋದನೆ ಪಡೆಯಲು ಸರ್ಕಾರ ಬಯಸಿದೆ. ಆ ಬಳಿಕವಷ್ಟೇ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ ಬಗ್ಗೆ ಚಿಂತನೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಚಳಿಗಾಲದ ಅಧಿವೇಶನ ಇದೇ 20ಕ್ಕೆ ಮುಕ್ತಾಯಗೊಳ್ಳಲಿದೆ.

Leave A Reply

Your email address will not be published.