Gold Suresh: ಗೋಲ್ಡ್ ಸುರೇಶ್ ಈಗಲೇ ಬ್ಯಾಕ್ ಪ್ಯಾಕ್ ಮಾಡಿ ಹೊರಬನ್ನಿ ಎಂದ ಬಿಗ್ ಬಾಸ್- ಇದ್ದಕ್ಕಿದ್ದಂತೆ ದೊಡ್ಮನೆಯಿಂದ ಗೋಲ್ಡ್ ಸುರೇಶ್ ಔಟ್ !! ಕಾರಣ ಹೀಗಿದೆ

Gold Suresh: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಮಿಂಚ ಬೇಕಿದ್ದ ಗೋಲ್ಡ್ ಸುರೇಶ್ ಅವರು ಈಗ ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅದಕ್ಕೆ ಕಾರಣವೂ ಕೂಡ ಇದೆ.

ಯಸ್.. ಈ ವಾರ ಗೋಲ್ಡ್ ಸುರೇಶ್(Gold Suresh)ಮನೆಯ ಕ್ಯಾಪ್ಟನ್ ಆಗಿದ್ದರು. ಅಲ್ಲದೇ, ‘ಉತ್ತಮ’ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದರು. ಆದರೆ ಅನಿವಾರ್ಯ ಕಾರಣದಿಂದ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಗಿದೆ. ಯಾಕೆಂದರೆ ಗೋಲ್ಡ್ ಸುರೇಶ್​ ಕುಟುಂಬದಲ್ಲಿ ಯಾವುದೋ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಕುಟುಂಬದವರಿಗೆ ಜಾಸ್ತಿ ಇದೆ.

ಈ ಹಿನ್ನಲೆಯಲ್ಲಿ ಗೋಲ್ಡ್ ಸುರೇಶ್ ಅವರಿಗೆ ಬಿಗ್ ಬಾಸ್ ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್​ ಮಾಡಿಕೊಂಡು ಕೂಡಲೇ ಬಿಗ್ ಬಾಸ್​ ಮನೆಯಿಂದ ಹೊರಗೆ ಬನ್ನಿ’ ಎಂದು ಸೂಚನೆ ನೀಡಲಾಗಿದೆ. ಸಧ್ಯ ಅನಿವಾರ್ಯ ಕಾರಣದಿಂದ ಅವರು ಈ ಶೋಗೆ ವಿದಾಯ ಹೇಳಿದ್ದಾರೆ. ಇನ್ನುಳಿದ ಸದಸ್ಯರು ಸುರೇಶ್​ಗೆ ಧೈರ್ಯ ತುಂಬಿದ್ದಾರೆ. ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದ ಸುರೇಶ್ ಅವರು ಈಗ ಆತಂಕದಲ್ಲಿ ಹೊರನಡೆದಿದ್ದಾರೆ.

Leave A Reply

Your email address will not be published.