Belthangady: ಕಾಡು ಪ್ರಾಣಿ ಎಂದು ಭಾವಿಸಿ ಸಾಕು ನಾಯಿಗೆ ಗುಂಡೇಟು
Belthangady: ಕಾಡು ಪ್ರಾಣಿ ಎಂದು ಭಾವಿಸಿ ಸಾಕು ನಾಯಿಗೆ ಕೋವಿಯಿಂದ ಗುಂಡು ಹಾರಿಸಿದ ಘಟನೆಯೊಂದು ಶನಿವಾರ (ಡಿ.14) ರಾತ್ರಿ ನಡೆದಿರುವ ಕುರಿತು ವರದಿಯಾಗಿದೆ. ಪೆರಾಜೆ ಗ್ರಾಮದಲ್ಲಿ ರಾತ್ರಿ ಕುಂದಲ್ಪಾಡಿ ದಯಾಕರ ಎಂಬುವವರ ಮನೆ ಬಳಿ ನಡೆದಿದೆ.
ಬೇಟೆಗೆಂದು ಬಂದ ವ್ಯಕ್ತಿಗಳು ದಯಾಕರ ಅವರ ಮನೆಯ ಸಾಕು ನಾಯಿಗೆ 11.30ಕ್ಕೆ ಗುಂಡು ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ. ಪರಿಣಾಮ ನಾಯಿ ಸಾವನ್ನಪ್ಪಿದೆ. ಮನೆಮಂದಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.