Vijayalakshmi Darshan: ಪತಿ ದರ್ಶನ್ ಗೆ ಜಾಮೀನು – ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತಾ?
Vijayalakshmi Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ (Darshan) ಹಾಗೂ ಪವಿತ್ರಾ ಗೌಡ (Pavithra Gowda) ಸೇರಿದಂತೆ 7 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಈ ಬಗ್ಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ(Vijayalakshmi Darshan) ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಅವರು ಮೊದಲ ಬಾರಿಗೆ ಏನು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ?
ದರ್ಶನ್ ಬಿಡುಗಡೆಗಾಗಿ ವಿಜಯಲಕ್ಷ್ಮೀ ಅವರು ಮಾಡದ ಪ್ರಾರ್ಥನೆಗಳಿಲ್ಲ, ಭೇಟಿ ನೀಡದ ದೇವಸ್ಥಾನಗಳಿಲ್ಲ. ಅನೇಕ ದೇವಾಲಯಗಳಿಗೆ ತೆರಳಿ ವಿಜಯಲಕ್ಷ್ಮೀ ದರ್ಶನ್ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದರು. ಈ ಪ್ರಾರ್ಥನೆ ಈಗ ಫಲ ಕೊಟ್ಟಿದೆ. ಈ ಬೆನ್ನಲ್ಲೇ
ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯಸ್, ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಹೂವಿನ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ದೇವಸ್ಥಾನದಲ್ಲಿ ಹೂವುನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಇನ್ನು ಸೋನಲ್ ಹಾಗೂ ತರುಣ್ ಕೂಡ ಸಂಭ್ರಮಿಸಿದ್ದಾರೆ.
ಅಂದಹಾಗೆ ಪರಸ್ತ್ರೀ ವಿಚಾರಕ್ಕೆ ಗಂಡ ಜಗಳವಾಡಿದ್ರೆ ಸಾಮಾನ್ಯವಾಗಿ ಕೋಪ ಬರುತ್ತೆ. ಅಂತದ್ರಲ್ಲಿ ಗೆಳತಿಗಾಗಿ ದರ್ಶನ್ ಜೈಲು ಸೇರುವಂತೆ ಆಯ್ತು. ಆದ್ರೂ ವಿಜಯಲಕ್ಷ್ಮಿ ಪತಿ ದರ್ಶನ್ ಕೈ ಬಿಡಲಿಲ್ಲ. ಗಂಡನಿಗಾಗಿ ಕೋರ್ಟು, ಕಚೇರಿಗಳಿಗೆ ಅಲೆದಾಡಿದ್ರು. ಗಂಡನನ್ನು ಜೈಲಿನಿಂದ ಹೊರಗೆ ತರಲು ದೇವರ ಮೊರೆ ಹೋಗಿದ್ರು. ಗುಡಿ-ಗೋಪುರಗಳನ್ನು ಸುತ್ತಿದ್ರು. ವಿಜಯಲಕ್ಷ್ಮಿ ರಾಜ್ಯ ಹಾಗೂ ಹೊರರಾಜ್ಯ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ದೇವಾಲಯಗಳಕ್ಕೆ ಹೋಗಿ ಪೂಜೆ ಸಲ್ಲಿಸಿ ಗಂಡನಿಗಾಗಿ ಹರಕೆ ಕಟ್ಟಿಕೊಂಡಿದ್ದಾರೆ ಎನ್ನಲಾಗ್ತಿದೆ.