Belagavi: ಕರಾವಳಿ ಕರ್ನಾಟಕದ ಬಹುದಿನದ ಬೇಡಿಕೆಗೆ ಒಪ್ಪಿಗೆ; ಭಾರತೀಯ ರೈಲ್ವೇಸ್ನೊಂದಿಗೆ ಕೊಂಕಣ್ ರೈಲ್ವೆ ವಿಲೀನ- ರಾಜ್ಯ ಸರಕಾರ ಒಪ್ಪಿಗೆ
Belagavi: ಕರಾವಳಿ ಕರ್ನಾಟಕದ ಜನರಿಗೆ ರಾಜ್ಯ ಸರಕಾರ ಸಿಹಿ ಸುದ್ದಿಯನ್ನು ನೀಡಿದೆ. ಕೊಂಕಣ್ ರೈಲ್ವೇಯನ್ನು ಭಾರತೀಯ ರೈಲ್ವೇಸ್ನೊಂದಿಗೆ ವಿಲೀನ ಮಾಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಜೊತೆಗೆ ರಾಜ್ಯ ಸರಕಾರವು ತನ್ನ ಸಂಪೂರ್ಣ ಒಪ್ಪಿಗೆಯನ್ನು ವ್ಯಕ್ತಪಡಿಸಿದ್ದು, ಪತ್ರವ್ಯವಹಾರವನ್ನು ಕೂಡಾ ಪ್ರಾರಂಭ ಮಾಡಿದೆ. ಈ ಕುರಿತು ಇಂಧನ ಸಚಿವ ಕೆಜೆ ಜಾರ್ಜ್ ವಿಷಯ ತಿಳಿಸಿದರು.
ವಿಲೀನದ ಕುರಿತು ರಾಜ್ಯ ಸರಕಾರ ಈಗಾಗಲೇ ಕೊಂಕಣ ರೈಲ್ವೆಗೆ ಪತ್ರ ಬರೆದಿದೆ. ಈ ಕುರಿತು ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಲು ಕರ್ನಾಟಕ ಸರಕಾರ ಅನುಮೋದನೆ ನೀಡಿದ್ದು ಸಂತೋಷವಾಗಿದೆ. ಇದು ದೀರ್ಘಾವಧಿಯ ಬೇಡಿಕೆಯಾಗಿತ್ತು. ರೈಲು ಮೂಲಸೌಕರ್ಯ ಮತ್ತು ಸಂಪರ್ಕವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಇಡೀ ಕರಾವಳಿ ಪ್ರದೇಶದ ಬೆಳವಣಿಗೆ ಈ ಮೂಲಕ ವೇಗಗೊಳಿಸುತ್ತದೆ. ಈ ವಿಷಯವನ್ನು ವಿಧಾನಸಭೆಯಲ್ಲಿ ಗಮನ ಸೆಳೆಯುವಂತೆ ಪ್ರಸ್ತಾಪ ಮಂಡಿಸಿ, ಚರ್ಚೆಗೆ ಅನುವು ಮಾಡಿಕೊಟ್ಟ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ವಿ ಸುನೀಲ್ ಕುಮಾರ್ ಅವರಿಗೆ ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ಬ್ರಿಜೇಜ್ ಚೌಟ ಅವರು ಧನ್ಯವಾದ ಹೇಳಿದ್ದಾರೆ.