Home News Gwalior Man Bites Ear: Pushpa-2 ಚಿತ್ರದ ಹೊಡೆದಾಟದ ದೃಶ್ಯ ಯುವಕನ ಕಿವಿ ಕಿತ್ತ ಕ್ಯಾಂಟೀನ...

Gwalior Man Bites Ear: Pushpa-2 ಚಿತ್ರದ ಹೊಡೆದಾಟದ ದೃಶ್ಯ ಯುವಕನ ಕಿವಿ ಕಿತ್ತ ಕ್ಯಾಂಟೀನ ಮಾಲೀಕ

Hindu neighbor gifts plot of land

Hindu neighbour gifts land to Muslim journalist

Gwalior Man Bites Ear: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಪುಷ್ಪಾ-2 ಚಿತ್ರದ ಪ್ರದರ್ಶನದ ವೇಳೆ ಥಿಯೇಟರ್ ಕ್ಯಾಂಟೀನ್ ನಲ್ಲಿ ಹಣ ಪಾವತಿ ವಿಚಾರವಾಗಿ ಜಗಳ ನಡೆದಿದೆ. ಇದರ ನಂತರ, ಕೋಪಗೊಂಡ ಕ್ಯಾಂಟೀನ್ ಮಾಲೀಕರು ಅಲ್ಲು ಅರ್ಜುನ್ ಅವರ ಹೊಡೆದಾಟದ ದೃಶ್ಯದಲ್ಲಿದ್ದಂತೆ ತಮ್ಮ ಗ್ರಾಹಕರ ಕಿವಿಯನ್ನು ಕಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಇಂದರ್‌ಗಂಜ್‌ನ ಕೈಲಾಶ್ ಟಾಕೀಸ್‌ನಲ್ಲಿ ಭಾನುವಾರ (ಡಿಸೆಂಬರ್ 8) ಈ ಆಘಾತಕಾರಿ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಸುದ್ದಿ ಸಂಸ್ಥೆ ಪಿಟಿಐಗೆ ಬಂದ ಮಾಹಿತಿಯ ಪ್ರಕಾರ, ಸಂತ್ರಸ್ತ ಯುವಕ ಶಬ್ಬೀರ್ ಎಂದು ಹೇಳಲಾಗಿದೆ. ಬುಧವಾರ ಪುಷ್ಪ-2 ಚಿತ್ರದ ಮಧ್ಯಂತರದಲ್ಲಿ ಊಟ ಮಾಡಲು ಶಬ್ಬೀರ್ ಥಿಯೇಟರ್ ಕ್ಯಾಂಟೀನ್‌ಗೆ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವೇಳೆ ಕ್ಯಾಂಟೀನ್ ಮಾಲೀಕ ರಾಜು ಹಾಗೂ ಗ್ರಾಹಕ ಶಬ್ಬೀರ್ ನಡುವೆ ಹಣ ಪಾವತಿ ವಿಚಾರವಾಗಿ ವಾಗ್ವಾದ ನಡೆದಿದೆ. ಶಬ್ಬೀರ್ ಹಣ ನೀಡಿಲ್ಲ ಎಂದು ರಾಜು ಆರೋಪಿಸಿದ್ದರು. ಇದಾದ ನಂತರ ವಾಗ್ವಾದ ವಿಕೋಪಕ್ಕೆ ಹೋಗಿದ್ದು, ಕೋಪದಲ್ಲಿ ರಾಜು ಮತ್ತು ಆತನ ಮೂವರು ಸಹಚರರು ಶಬ್ಬೀರ್ ಜೊತೆ ಜಗಳವಾಡಿದ್ದಾರೆ.

ಜಗಳದ ವೇಳೆ ಕ್ಯಾಂಟೀನ್ ಮಾಲೀಕ ರಾಜು ತನ್ನ ಕಿವಿ ಕಚ್ಚಿದ್ದಾನೆ ಎಂದು ಸಂತ್ರಸ್ತ ಶಬ್ಬೀರ್ ದೂರಿನಲ್ಲಿ ತಿಳಿಸಿದ್ದಾಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ಈ ಮಾಹಿತಿ ನೀಡಿದ್ದಾರೆ. ರಾಜು ಮತ್ತು ಆತನ ಸಂಗಡಿಗರು ಶಬ್ಬೀರ್‌ಗೆ ಕೊಲೆ ಬೆದರಿಕೆ ಹಾಕಿದಾಗ ಆತನ ಕಿವಿಯನ್ನು ಕತ್ತರಿಸಿದ್ದಾರೆ. ಇದಾದ ಬಳಿಕ ಶಬ್ಬೀರ್ ಕಳೆದ ಸೋಮವಾರ ಪೊಲೀಸರಿಗೆ ದೂರು ನೀಡಿದ್ದರು. ನಂತರ ಮಂಗಳವಾರ ಶಬ್ಬೀರ್ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿ ಆಧರಿಸಿ ಪೊಲೀಸರು ಕ್ಯಾಂಟೀನ್ ಮಾಲೀಕ ರಾಜು ಹಾಗೂ ಆತನ ಮೂವರು ಸಹಚರರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ರಾಜು ಸೇರಿದಂತೆ ನಾಲ್ವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 294, 323 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.