Bigg Boss: ಕಿಚ್ಚ ಸುದೀಪ್‌, ಬಿಗ್‌ ಬಾಸ್‌ಗೆ ಲಾಯರ್‌ ಜಗದೀಶ್ ಸಖತ್ ಕ್ಲಾಸ್‌- ಕಾರಣ ಕಂಟೆಸ್ಟೆಂಟ್ ಮೋಕ್ಷಿತಾ..!! ಹಾಗಿದ್ರೆ ಏನದು ಗೊತ್ತಾ?

Bigg boss: ಬಿಗ್‌ ಬಾಸ್‌ ಕನ್ನಡ (Bigg boss) ಸೀಸನ್ 11ರ ಸ್ಪರ್ಧಿ ಮೋಕ್ಷಿತಾ ಪೈ ನಿಮಗೆಲ್ಲರಿಗೂ ಗೊತ್ತಿರಬಹುದು. ಇತ್ತೀಚಿಗೆ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಈಕೆಯ ವಿರುದ್ಧ ಮಕ್ಕಳನ್ನು ಕಿಡ್ನಾಪ್ ಮಾಡಿರುವಂತಹ ಆರೋಪ ಕೇಳಿ ಬರುತ್ತಿದೆ. ಜೊತೆಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಅವರ ಫೋಟೋ ಬಳಸಿ ವೈರಲ್ ಮಾಡಲಾಗುತ್ತಿದೆ.

ಈ ಬಗ್ಗೆ ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ ಲಾಯರ್‌ ಜಗದೀಶ್ ಮಾತನಾಡಿದ್ದು, ‘ಈ ರೀತಿ ಮಕ್ಕಳನ್ನು ಕಿಡ್ನಾಪ್ ಮಾಡಿರುವಂತಹ ಆರೋಪ ಇರುವ ವ್ಯಕ್ತಿಯನ್ನು ಬಿಗ್‌ ಬಾಸ್‌ ತಂಡ ಯಾವ ಆಧಾರದ ಮೇಲೆ ಕರೆದುಕೊಂಡು ಬಂದು ಜನರ ಮುಂದೆ ನಿಲ್ಲಿಸುತ್ತಾರೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ನಮ್ಮ ಮುಂದೆ ಇರುವ ದೊಡ್ಡ ಪ್ರಶ್ನೆ ಎಂದರೆ ಮೋಕ್ಷಿತಾ ಮುಖಾಂತರ ಬಿಗ್‌ ಬಾಸ್‌ ಕರ್ನಾಟಕಕ್ಕೆ ಏನು ಸಂದೇಶ ಕೊಡುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

‘ಮೋಕ್ಷಿತಾ ಮತ್ತು ಆಕೆಯ ಗೆಳೆಯ ನಾಗಭೂಷಣ್ ಮಕ್ಕಳ ಕಿಡ್ನಾಪ್ ಆರೋಪ ಹೊತ್ತಿದ್ದಾರೆ. ನಿಜವಾಗಿಯೂ ಇದು ಅದೇ ಮೋಕ್ಷಿತಾನಾ..? ಅಲ್ಲಿ ಐಶ್ವರ್ಯ. ಆಕೆಯ ಹೆಸರು ಐಶ್ವರ್ಯ ಪೈ ಎನ್ನುವ ಮಾಹಿತಿ ಸಿಕ್ಕಿದೆ. ಮೊದಲು ಐಶ್ವರ್ಯ ಪೈ ಅಂತಾ ಇತ್ತು. ಈ ಕೇಸ್‌ ಆದ ಮೇಲೆ ಹೆಸರು ಹಾಳಾಗಿದೆ ಅಂತಾ ಹೆಸರನ್ನು ಮೋಕ್ಷಿತಾ ಪೈ ಎಂದು ಬದಲಾಯಿಸಿಕೊಂಡಿದ್ದಾರೆ’. ಇಂತವರನೆಲ್ಲಾ ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ಕರೆದುಕೊಂಡು ಮನೆಯಲ್ಲಿ ಇರಿಸಿಕೊಂಡಿದ್ದಾರಲ್ಲಾ ಆ ಬಿಗ್‌ ಬಾಸ್‌ ಅವರಿಗೆ ಏನು ಹೇಳಬೇಕೋ ನನಗಂತೂ ಗೊತ್ತಿಲ್ಲ’ ಎಂದಿದ್ದಾರೆ.

ಮುಖ್ಯವಾಗಿ ‘ಜೈಲೂಟ ತಿಂದು ಬಂದ ಮೋಕ್ಷಿತಾರಂತಹ ಕ್ರಿಮಿನಲ್‌ಗಳನ್ನು ಕರೆದುಕೊಂಡು ಬಂದು ಬಿಗ್‌ ಬಾಸ್‌ನವರು ಏನು ಸಂದೇಶ ಕೊಡುತ್ತಾರೋ ಗೊತ್ತಿಲ್ಲ. ಸುದೀಪ್‌ ಅವರು ಯೋಚನೆ ಮಾಡಬೇಕು ಕನಿಷ್ಠ ಮಾನದಂಡಗಳನ್ನು ಹಿಡಿದುಕೊಂಡು ಸ್ಪರ್ಧಿಗಳನ್ನು ಕರೆದುಕೊಂಡು ಬನ್ನಿ. ಈ ಬಿಗ್‌ ಬಾಸ್‌ ಸಾರ್ವಜನಿಕವಾಗಿ ಆಕರ್ಷಿತವಾಗಿರುವ ಕಾರ್ಯಕ್ರಮ. ಇಂತಹ ಕ್ರಮಿನಲ್‌ಗಳನ್ನು ಕರೆದುಕೊಂಡು ಬಂದು ಏನು ಸಂದೇಶ ಕೊಡುತ್ತೀರಾ’ ಎಂದು ಲಾಯರ್‌ ಜಗದೀಶ್ ಬಿಗ್‌ ಬಾಸ್‌ಗೆ ಪ್ರಶ್ನಿಸಿದ್ದಾರೆ.

Leave A Reply

Your email address will not be published.