Tatkal Tickets: ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲಾವಣೆ! ಇಲ್ಲಿದೆ ಅಪ್ಡೇಟ್
Tatkal Tickets: ತತ್ಕಾಲ್ ಟಿಕೆಟ್ ವಿಶೇಷ ವರ್ಗದ ರೈಲ್ವೆ ಟಿಕೆಟ್ (Tatkal Tickets) ಆಗಿದ್ದು, ಪ್ರಯಾಣದ ದಿನಾಂಕಕ್ಕೆ ಒಂದು ದಿನ ಮೊದಲು ಕಾಯ್ದಿರಿಸಬಹುದು. ಕೊನೆಯ ಕ್ಷಣದಲ್ಲಿ ಪ್ರಯಾಣವನ್ನು ಅಂತಿಮಗೊಳಿಸಿದಾಗ ಅಥವಾ ತುರ್ತು ಕಾರ್ಯಗಳನ್ನು ಹೊಂದಿರುವವರಿಗೆ ಇದು ಉಪಯುಕ್ತವಾಗಿದೆ.
ಆದ್ರೆ ರೈಲ್ವೆ ಇತ್ತೀಚೆಗೆ ತತ್ಕಾಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಮಾಡಿದೆ. ಬುಕಿಂಗ್ ಸಮಯವನ್ನು ಸರಿಹೊಂದಿಸಲಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ಟಿಕೆಟ್ ಗಳನ್ನು ಹೆಚ್ಚು ಸಮಯ ಸೆಕ್ಯೂರ್ ಮಾಡಿಕೊಳ್ಳಬಹುದಾಗಿದೆ. ಹೊಸ ನಿಯಮದ ಪ್ರಕಾರ, ಎಸಿ ಕ್ಲಾಸ್ ತತ್ಕಾಲ್ ಟಿಕೆಟ್ ಬುಕಿಂಗ್ ಈಗ ಬೆಳಿಗ್ಗೆ 10:10 ರಿಂದ ಪ್ರಾರಂಭವಾಗಲಿದೆ.
ಇನ್ನು ನಾನ್ ಎಸಿ ಕ್ಲಾಸ್ ತತ್ಕಾಲ್ ಬುಕಿಂಗ್ ಬೆಳಿಗ್ಗೆ 11:10 ರಿಂದ ಪ್ರಾರಂಭವಾಗಲಿದೆ. ಈ ಬದಲಾವಣೆಗಳು ಬುಕಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿವೆ, ವಿಶೇಷವಾಗಿ ತುರ್ತು ಪ್ರಯಾಣಕ್ಕಾಗಿ ಟಿಕೆಟ್ ಅಗತ್ಯವಿರುವವರಿಗೆ ಇದು ಪ್ರಯೋಜನ ಆಗಲಿದೆ.