Pratap Simha: ‘ಲೋಕಸಭಾ ಟಿಕೆಟ್ ಕೈತಪ್ಪಿದಾಗ ಎಸ್ಎಮ್ ಕೃಷ್ಣ ನನಗೆ ಕಾಲ್ ಮಾಡಿ ಏನು ಹೇಳಿದ್ರು ಗೊತ್ತಾ?’- ಮಾಜಿ ಸಂಸದ ಪ್ರತಾಪ್ ಸಿಂಹ ಅಚ್ಚರಿ ಹೇಳಿಕೆ
Prathap Simha: ರಾಷ್ಟ್ರ ಕಂಡ ಧೀಮಂತ ರಾಜಕಾರಣಿ ಎಸ್ಎಂ ಕೃಷ್ಣ ಅವರ ಸಾವಿಗೆ ಇಡೀ ದೇಶ ಸಂತಾಪ ಸೂಚಿಸುತ್ತಿದೆ. ಅನೇಕ ಗಣ್ಯಮಾನ್ಯರು ರಾಜಕೀಯ ವ್ಯಕ್ತಿಗಳು ಎಸ್ಎಂಕೆ ಅವರ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಂತೆಯೇ ಬಿಜೆಪಿಯ ಮಾಜಿ ಪ್ರತಾಪ್ ಸಿಂಹ(Pratap Simha)ಅವರು ಕೂಡ ಎಸ್ ಎಂ ಕೆ ಅವರ ದರ್ಶನ ಪಡೆದಿದ್ದಾರೆ. ಈ ವೇಳೆ ಅವರು ಕೆಲವು ಭಾವನಾತ್ಮಕ ನುಡಿಗಳನ್ನು ಹಂಚಿಕೊಂಡಿದ್ದಾರೆ.
ಹೌದು ಎಸ್ಎಂ ಕೃಷ್ಣ(SM Krishna)ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು ನನಗೆ ಕಳೆದ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದ ಸಂದರ್ಭದಲ್ಲಿ ಎಸ್ಎಮ್ ಕೃಷ್ಣ ಅವರು ಕರೆ ಮಾಡಿ ಧೈರ್ಯ ತುಂಬಿದರು. ಈ ವೇಳೆ ಅವರು “ನಿನಗೆ ಅನ್ಯಾಯ ಆಯಿತು. ಒಳ್ಳೆಯ ಕೆಲಸಗಳನ್ನ ಮಾಡ್ತಿದ್ದೆ. ಆದರೆ ಟಿಕೆಟ್ ಕೈತಪ್ಪಿದ್ದರಿಂದ ಅಧೀರನಾಗಬೇಡ ಮುಂದಿನ ದಿನಗಳು ಒಳ್ಳೆಯದಾಗಿರುತ್ತೆ ಎಂದು ಹೇಳಿದ್ದರು. ಅವರ ಮನೆಯವರೂ ಸಹ ನನಗೆ ಸಮಾಧಾನ ಹೇಳಿದ್ದರು” ಎಂದು ಭಾವುಕರಾಗಿದ್ದಾರೆ.
ಅಲ್ಲದೆ “ಎಸ್‌ಎಂ ಕೃಷ್ಣ ಕರ್ನಾಟಕದ ಲೆಜೆಂಡರಿ ಚೀಫ್ ಮಿನಿಸ್ಟರ್, ನಾನು ರಾಜಕಾರಣಕ್ಕೆ ಹೊಸಬ, ನನಗೆ ಟಿಕೆಟ್ ಕೈತಪ್ಪಿದಾಗ ಬೇರೆ ಯಾವ ರಾಜಕಾರಣಿಯೂ ಕರೆ ಮಾಡಿ ಮಾತನಾಡಲಿಲ್ಲ. ಆದರೆ ಎಸ್‌ಎಂ ಕೃಷ್ಣ ಅವರು ಮಾತನಾಡಿದ್ದರು. ಅಂತಹ ದೊಡ್ಡ ವ್ಯಕ್ತಿ ನನಗೆ ಸಮಾಧಾನ ಮಾಡಿದ್ದರು ನನ್ನ ಮೇಲೆ ಅವರಿಗಿದ್ದ ಪ್ರೀತಿ, ಕಾಳಜಿಗೆ ನಾನು ಋಣಿಯಾಗಿರುತ್ತೇನೆ’ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.