Fetal Mortality: ಮಗು ಭ್ರೂಣದಲ್ಲಿ ಸಾವನ್ನಪ್ಪುತ್ತಿರುವ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ! ಇದರ ತಡೆಗೆ ಕ್ರಮಗಳೇನು?
Fetal Mortality: ಭಾರತವು (India) ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಅಂತೆಯೇ ಭಾರತವು ವಿಶ್ವದಲ್ಲಿಯೇ ಭ್ರೂಣ ಮರಣದಲ್ಲಿ ಮುಂಚೂಣಿಯಲ್ಲಿದೆ (Fetal Mortality) .
ಹೌದು, ಭ್ರೂಣ ಹತ್ಯೆ ಮಾಡುವುದರ ಹೊರತಾಗಿಯೂ ಭಾರತದಲ್ಲಿ ಭ್ರೂಣದಲ್ಲಿ ಶಿಶುಗಳ ಮರಣ ಹೊಂದುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಹಿಂದೆ ಹಲವು ಕಾರಣಗಳಿವೆ. ಅಧಿಕ ರಕ್ತದೊತ್ತಡ, ಗರ್ಭಾವಸ್ಥೆಯ ಮಧುಮೇಹ, ಸೋಂಕುಗಳು, ಅಪೌಷ್ಟಿಕತೆಯಂತಹ ತಾಯಿಯಲ್ಲಿನ ಸಮಸ್ಯೆಗಳು ಭ್ರೂಣದಲ್ಲಿ ಮಗು ಸಾವನ್ನಪ್ಪಲು ಪ್ರಮುಖ ಕಾರಣವಾಗುತ್ತದೆ.
ಭ್ರೂಣ ಮರಣ ಎಂದರೆ ಒಂದು ಹೆಣ್ಣು ಗರ್ಭಿಣಿಯಾದ ಬಳಿಕ ಮಗು ಹೊಟ್ಟೆಯಲ್ಲಿಯೇ ಉಸಿರಾಟ, ಹೃದಯ ಇಲ್ಲದೇ ಇರುವುದು ಅಥವಾ ಹೆರಿಗೆಯ ಬಳಿಕ ಉಸಿರಾಡದೇ ಇರುವುದು ಈ ರೀತಿಯ ಸಮಸ್ಯೆಯಿಂದ ಮೃತಪಟ್ಟಿರುತ್ತದೆ ಇದನ್ನು ಭ್ರೂಣ ಮರಣ ಎಂದು ಕರೆಯಲಾಗುತ್ತದೆ.
ಗರ್ಭಾವಸ್ಥೆಯ 28 ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಮರಣಹೊಂದಿದ ಮಗು ಜನನ ಹೊಂದುತ್ತವೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನನ ಪ್ರಕಾರ, 2021ರಲ್ಲಿ ಭಾರತದಲ್ಲಿ 20 ವಾರಗಳ ಗರ್ಭಾವಸ್ಥೆಯಲ್ಲಿ 567,000 ಮತ್ತು 28 ವಾರಗಳ ಗರ್ಭಾವಸ್ಥೆಯಲ್ಲಿ 397,300 ಮರಣ ಹೊಂದಿದ ಶಿಶುಗಳು ಜನಿಸಿರುವುದನ್ನು ವರದಿ ಹೊಂದಿದೆ. ಇದು ಜಾಗತಿಕವಾಗಿ ಅತೀ ಹೆಚ್ಚು ಭ್ರೂಣ ಮರಣಗಳ ಸಂಖ್ಯೆಯಾಗಿದೆ. ಹೆರಿಗೆಯ ಸಂಖ್ಯೆ ಕಡಿಮೆಯಾದರೂ ಕೂಡ ಭ್ರೂಣ ಮರಣಗಳ ಇಳಿಕೆಯ ವೇಗ ಕಡಿಮೆಯಾಗಿದೆ. ಒಟ್ಟಿನಲ್ಲಿ 2030ರ ವೇಳೆಗೆ 28 ವಾರಗಳ ಗರ್ಭಾವಸ್ಥೆಯ ಅವಧಿಯಲ್ಲಿ ಮರಣ ಹೊಂದಿದ ಜನನದ ಪ್ರಮಾಣವನ್ನು 1000ಕ್ಕೆ ಇಳಿಸುವ ಗುರಿಯನ್ನು ಜಾಗತಿಕ ನವಜಾತ ಕ್ರಿಯಾ ಯೋಜನೆಯು ಹೊಂದಿದೆ.
ಭಾರತದಲ್ಲಿ ಭ್ರೂಣ ಮರಣದ
ಮೂಲ ಕಾರಣ ತಾಯಿಯ ಜೀವನ ಶೈಲಿ, ಅಪೌಷ್ಟಿಕತೆ, ಅನುವಂಶೀಯತೆ ಎನ್ನುವುದು ಮೂಲ ಕಾರಣಗಳಾಗಿ ಪರಿಣಮಿಸುತ್ತವೆ. 20% ರಷ್ಟು ಭ್ರೂಣ ಮರಣವು ಅನುವಂಶೀಯಾಗಿ ಹಾಗೂ 13% ನಷ್ಟು ಅಸಮರ್ಪಕ ಭ್ರೂಣದ ಬೆಳವಣಿಗೆಯಿಂದ ಹೊಂದುತ್ತದೆ. ಇನ್ನೂ ಕೆಲವು ಗ್ರಾಮೀಣ ವಸತಿ ಸ್ಥಿತಿ, ಕಡಿಮೆ ಸಾಮಾಜಿಕ-ಆರ್ಥಿಕ ಸ್ತರಗಳು ಮತ್ತು ಪ್ರಸವಪೂರ್ವ ಆರೈಕೆಯ ಕಳಪೆಯಿಂದಾಗಿ ಮರಣ ಹೊಂದುತ್ತವೆ.
ಇನ್ನೂ ಇದರಿಂದ ತಾಯಿಯ ಮೇಲೆ ಪರಿಣಾಮ ಬೀರುವುದಲ್ಲದೇ, ಖಿನ್ನತೆ, ಆತಂಕ ಹಾಗೂ ಮಾನಸಿಕ ರೋಗಗಳಿಂದ ಬಳಲುತ್ತಾರೆ. ಅವರ ಪಾಲುದಾರರು ಹೆಚ್ಚಿನ ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ರೋಗಲಕ್ಷಣಗಳಿಂದ ಬಳಲುತ್ತಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೆರಿಗೆಗಳ ಸಾಂಕ್ರಾಮಿಕ ರೋಗಶಾಸ್ತ್ರ, ರೋಗನಿರ್ಣಯ ಮತ್ತು ತಡೆಗಟ್ಟುವಿಕೆ ಮತ್ತು ಆರೋಗ್ಯ ವ್ಯವಸ್ಥೆ ಮೂಲಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ಭಾರತವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ವೈದ್ಯಕೀಯ ತಜ್ಞರು ಪೆರಿಕಾನ್ಸೆಪ್ಷನಲ್ ಫೋಲಿಕ್ ಆಸಿಡ್ ಪೂರೈಕೆ, ಸಿಫಿಲಿಸ್ ಮತ್ತು ಮಲೇರಿಯಾದಂತಹ ಸೋಂಕುಗಳ ಆರಂಭಿಕ ಪತ್ತೆ, ಮಧುಮೇಹ ನಿರ್ವಹಣೆ ಮತ್ತು ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಅಸ್ವಸ್ಥತೆಗಳ ಪತ್ತೆ ಹಾಗೂ ಪೌಷ್ಟಿಕಾಂಶ ಆಹಾರ ಮೂಲಕ ತಡೆಗಟ್ಟುವ ಕ್ರಮಗಳನ್ನು ಸೂಚಿಸುತ್ತದೆ.