U T Khadhar: ಸುವರ್ಣ ಸೌಧದಲ್ಲಿನ ಸಾವರ್ಕರ್ ಫೋಟೋ ತೆರವುಗೊಳಿಸುವ ವಿಚಾರ – ಸ್ಪೀಕರ್ ಯುಟಿ ಖಾದರ್ ಮಹತ್ವದ ಹೇಳಿಕೆ !!
U T Khadar : ಬೆಳಗಾವಿ ಅಧಿವೇಶನ ಹಾಲ್‌ನಲ್ಲಿರುವ ಫೋಟೋ ವಿವಾದ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆ ಇದೆ. ಬಿಜೆಪಿ ಸರ್ಕಾರ ಅಳವಡಿಸಿದ ಸಾವರ್ಕರ್ ಫೋಟೋವನ್ನು ಕಾಂಗ್ರೆಸ್ ಸರ್ಕಾರ ತೆರವುಗೊಳಿಸುತ್ತಾ, ಇಲ್ಲ ಸ್ಪೀಕರ್ ಯುಟಿ ಖಾದರ್ ತೆಗೆಸುತ್ತಾರಾ ಎಂಬುದು ಭಾರೀ ಕುತೂಹಲಕೆರಳಿಸಿತ್ತು. ಆದರೆ ಇದುವರೆಗೂ ಸರ್ಕಾರ ಅಥವಾ ಸ್ಪೀಕರ್ ಆ ಒಂದು ನಿರ್ಣಯಕ್ಕೆ ಮುಂದಾಗಲಿಲ್ಲ. ಆದರೆ ಈಗ ಸದ್ಯದಲ್ಲೇ ಬೆಳಗಾವಿಯಲ್ಲಿ ಮತ್ತೆ ಅಧಿವೇಶನ ನಡೆಯಲಿದ್ದು ಈ ಫೋಟೋ ವಿವಾದ ಮುನ್ನಲೆಗೆ ಬಂದಿದೆ. ಇದೀಗ ಸಾವರ್ಕರ್ ಫೋಟೋ ತೆಗೆಯುವ ವಿಚಾರದ ಬಗ್ಗೆ ಸ್ಪೀಕರ್ ಯುಟಿ ಖಾದರ್(U T Khadar) ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಹೌದು, ಬಿಜೆಪಿ(BJP) ಅವಧಿಯಲ್ಲಿ ಸುವರ್ಣಸೌಧದಲ್ಲಿ(Suvarna Soudha)ಅಳವಡಿಸಿದ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಫೋಟೋ ತೆಗೆಯುವ ಕುರಿತಾದ ಪ್ರಶ್ನೆಗೆ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು ‘ನಾವು ರಚನಾತ್ಮಕ ಮಾರ್ಗ ಅನುಸರಿಸುತ್ತೇವೆ ಹೊರತೂ ವಿನಾಶದ ಹಾದಿ ತುಳಿಯುವುದಿಲ್ಲ. ಸಕಾರಾತ್ಮಕ ಚಿಂತನೆಗಳಿಗೆ ಮಾತ್ರ ಅವಕಾಶವಿದೆ ಎಂದು ಹೇಳುವ ಮೂಲಕ ಭಾವಚಿತ್ರ ತೆಗೆಯುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.