U.P: ಯೂಟ್ಯೂಬ್‌ ವೀಡಿಯೋ ನೋಡಿದ ಪತ್ನಿಗೆ ತಲಾಖ್‌ ನೀಡಿದ ಪತಿ

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಸಂಭಾಲ್ ಹಿಂಸಾಚಾರದಲ್ಲಿ ಪೊಲೀಸರ ಕ್ರಮವನ್ನು ಬೆಂಬಲಿಸಿದ ಕಾರಣಕ್ಕೆ ಮಹಿಳೆಗೆ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯ ಈ ಕ್ರಮದಿಂದ ಕೋಪಗೊಂಡ ಪತಿ ಆಕೆಗೆ ತ್ರಿವಳಿ ತಲಾಖ್ ನೀಡಿದ್ದು, ಆಕೆ ಪೊಲೀಸರನ್ನು ಬೆಂಬಲಿಸುವ ಮತ್ತು ಮುಸ್ಲಿಮರನ್ನು ವಿರೋಧಿಸುವ ಕಾರಣ ಆಕೆಯನ್ನು ಮನೆಯಲ್ಲಿ ಇಡುವುದಿಲ್ಲ ಎಂದು ಹೇಳಿದ್ದಾನೆ.

ಪತಿ ತ್ರಿವಳಿ ತಲಾಖ್ ನೀಡಿದ ನಂತರ ಸಂತ್ರಸ್ತೆ ಎಸ್‌ಎಸ್‌ಪಿ ಕಚೇರಿಯಲ್ಲಿ ನ್ಯಾಯಕ್ಕಾಗಿ ಮನವಿ ಮಾಡಿದ್ದು, ಪೊಲೀಸರಿಗೆ ಬೆಂಬಲ ನೀಡಿದ ಕಾರಣಕ್ಕೆ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಸಂಭಾಲ್ ಹಿಂಸಾಚಾರದ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುತ್ತಿದ್ದು, ಪೊಲೀಸರು ಗಲಭೆಕೋರರ ಮೇಲೆ ಲಾಠಿ ಪ್ರಹಾರ ಮಾಡುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾಳೆ. ತಕ್ಷಣ ಪತಿ ಕೋಪಗೊಂಡು ಪತ್ನಿಗೆ ತ್ರಿವಳಿ ತಲಾಖ್ ನೀಡಿ ಆಕೆಯನ್ನು ಮುಸ್ಲಿಮರ ಶತ್ರು ಎಂದು ಕರೆದಿದ್ದಾನೆ.

ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು.

ಮೊರಾದಾಬಾದ್‌ನ ಕಟ್ಘರ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.

ಏನಿದು ಘಟನೆ?
ಸಂಭಾಲ್‌ ಮಸೀದಿ ವಿವಾದ ಇತ್ತೀಚೆಗೆ ಭಾರೀ ತೀವ್ರಗೊಂಡಿದ್ದು, ಹಿಂದು ಹರಿಹರ ಮಂದಿರ ಮೇಲೆ ಮಸೀದಿ ನಿರ್ಮಿಸಲಾಗಿದೆ ಎನ್ನುವ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿತ್ತು. ಇದರಿಂದ ಸಂಭಾಲ್‌ ಸಮೀಕ್ಷೆಗೆ ಆಗಮಿಸಿದ ವೇಳೆ ಭಾರೀ ಪ್ರತಿಭಟನೆ ನಡೆದಿತ್ತು. ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಮಸೀದಿ ರಕ್ಷಣೆ ಹೆಸರಿನಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ನಂತರ ಪೊಲೀಸರ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು.

ಸಂಭಾಲ್‌ ಮಸೀದಿ ಬಳಿ ಪೊಲೀಸರು ಮಾಡಿದ ಕಾರ್ಯಾಚರಣೆ ವೀಡಿಯೋವನ್ನು ನೋಡಿರುವುದೇ ಇದೀಗ ಈ ಡಿವೋರ್ಸ್‌ಗೆ ಕಾರಣವಾಗಿದೆ.

Leave A Reply

Your email address will not be published.