Mangaluru : ಹಿಂದೂಗಳ ಮನೆಗೆ ನುಗ್ಗಿದ ಅನ್ಯ ಕೋಮಿನ ವ್ಯಕ್ತಿ – ಹಿಂದೂ ಯುವತಿ, ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮಾಡಿ ಹಲ್ಲೆ; ಆರೋಪಿ ಸೈಯದ್ ನಯೀಮ್ ಬಂಧನ..!

Mangaluru : ಹಿಂದೂ ಯುವತಿ ಮತ್ತು ಮಹಿಳೆ ಇರುವಂತಹ ಮನೆಗೆ ಅನ್ಯ ಕೋಮಿನ ವ್ಯಕ್ತಿ ಒಬ್ಬ ಕಿಟಲೆ ಮಾಡಿ ಹಲ್ಲೆ ನಡೆಸಿರುವಂತಹ ಪ್ರಕರಣ ಮಂಗಳೂರಿನಲ್ಲಿ(Mangaluru) ಬೆಳಕಿಗೆ ಬಂದಿದೆ. ಬಳಿಕ ಮಾಹಿತಿ ಪಡೆದ ಸ್ಥಳೀಯರು ಯುವಕಕನ್ನು ಹಿಡಿದು ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ್ದಾರೆ

ಹೌದು, ಮಂಗಳೂರಿನ ಕುಲಶೇಖರದಲ್ಲಿ ಮನೆಯೊಂದರಲ್ಲಿ ಹಿಂದೂ ಯುವತಿ ಮತ್ತು ಮಹಿಳೆ ಇದ್ದು, ಆ ಮನೆಗೆ ಅನ್ಯ ಕೋಮಿನ ಯುವಕನೋರ್ವ ಬಂದು ಕಿಟಾಲೆ ಮತ್ತು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಅಂದಹಾಗೆ ಈತ ಮಹಿಳೆಗೆ ರವಿ ಎಂಬ ಹೆಸರಿನಲ್ಲಿ ಒಂದು ವರ್ಷದ ಹಿಂದೆ ಪರಿಚಯವಾಗಿದ್ದು ಆಗಾಗ ಮಹಿಳೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಇವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರವೂ ಇತ್ತೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಬಂದಿದ್ದ ಯುವಕ ಮಹಿಳೆ ಮತ್ತು ಮಹಿಳೆಯ ಅಕ್ಕನ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಇದರಿಂದ ಮಹಿಳೆ ಮತ್ತು ಯುವಕನ ಮಧ್ಯೆ ಗಲಾಟೆ ನಡೆದಿದೆ.

ಮಾಹಿತಿ ಪಡೆದ ಸ್ಥಳಿಯರು ಬಂದು ಯುವಕಕನ್ನು ಹಿಡಿದು ಧರ್ಮದೇಟು ನೀಡಿ ವಿಚಾರಿಸಲಾಗಿ ಆತನೊಬ್ಬ ಮುಸ್ಲೀಂ ಎಂದೂ ಹೆಸರು ಸೈಯದ್ ನಹೀಮ್ (25) ಶಿವಮೊಗ್ಗದವ ಎಂದು ಬಾಯ್ಬಿಟ್ಟಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಯುವಕಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಂಕನಾಡಿ ನಗರ ಠಾಣಾ ಪೊಲೀಸರು ಆರೋಪಿ ಸಯೀದ್‌ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.

Leave A Reply

Your email address will not be published.