Dakshina Kannada: ನೇತ್ರಾವತಿಗೆ ಇನ್ನೊಂದು ಸೇತುವೆ-ಸಂಪುಟ ಅಸ್ತು
Dakshina Kannada: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಾಗಾಗಿ ಬಹುವರ್ಷಗಳ ಬೇಡಿಕೆ ಈ ಮೂಲಕ ಈಡೇರಿದೆ.
ಮಂಗಳೂರು ತಾಲೂಕಿನ ಮಂಗಳೂರು-ಚೆರ್ವತ್ತೂರು-ಕರಾವವಳಿ ಜಿಲ್ಲಾ ಮುಖ್ಯ ರಸ್ತೆ (ಕೋಟೆಪುರ-ಬೋಳಾರ)ಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಇದು ದಶಕದ ಬೇಡಿಕೆಯಾಗಿದ್ದು, ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಇದು ಈ ಭಾಗದಲ್ಲಿ ನೆಲೆಸಿರುವ ಜನರಿಗೆ ನಿಜಕ್ಕೂ ಅನುಕೂಲದಾಯಕವಾಗಲಿದೆ.
ಜೆಪ್ಪಿನಮೊಗರು ಬಳಿಯ ರಾ.ಹೆ.66 ರ ಸೇತುವೆ ಬಳಿ ಇರುವ ರೈಲ್ವೇ ಸೇತುವೆಯ ಆಚೆಗೆ ಪಶ್ಚಿಮ ಭಾಗದಲ್ಲಿ ಸೇತುವೆ ಇದು. ಕೋಟೆಪುರ ಹಾಗೂ ಬೋಳಾಪುರ ಮಧ್ಯೆ ಈ ಸೇತುವೆ ನಿರ್ಮಾಣಗೊಳ್ಳಲಿದೆ. 1,400 ಮೀ ಉದ್ದ ಇರಲಿದೆ. ಇದರ ಮೂಲಕ ಮಂಗಳೂರು-ಕೇರಳ ಮಧ್ಯೆ ಮೀನುಗಾರಿಕೆ ಉದ್ದೇಶದ ಸರಕುಗಳು ಸಂಚರಿಸಲು ಸಾಧ್ಯ.
ಈ ಮೂಲಕ ಹೆದ್ದಾರಿಯ ಓಡಾಟದ ಕಿರಿಕಿರಿ ತಪ್ಪುವುದು. ಕಾಸರಗೋಡು-ಮಂಗಳೂರು ಮಧ್ಯೆ ಪರ್ಯಾಯ ರಸ್ತೆಗೂ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.