Mangaluru : ಥೈಲ್ಯಾಂಡ್ ಬೆಡಗಿಯನ್ನು ವರಿಸಿದ ಮಂಗಳೂರು ಯುವಕ – ಮಂಗಳಾದೇವಿ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ

Mangaluru : ಮಂಗಳೂರಿನ ಯುವಕನೊಬ್ಬ ಥೈಲ್ಯಾಂಡ್ ಯುವತಿಯನ್ನು ಸಿಂಪಲ್ ಲವ್ ಕಮ್ ಆ್ಯರೇಂಜ್ ಮ್ಯಾರೇಜ್ ಆಗಿದ್ದಾನೆ. ಈ ಮೂಲಕ ಥೈಲ್ಯಾಂಡ್‌ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯೋ ಮೂಲಕ ಸುಂದರ ತಿರುವು ಪಡೆದಿದೆ. ಈ ಸುಂದರ ಲವ್ ಸ್ಟೋರಿ ಯ ಕ್ಯೂಟ್ ಸ್ಟೋರಿ ಇಲ್ಲಿದೆ ನೋಡಿ..

ಮಂಗಳೂರಿನ(Mangaluru )ಪೃಥ್ವಿರಾಜ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ. ಕಳೆದ ಫೆಬ್ರವರಿ ತಿಂಗಳಲ್ಲಿ ಫೃಥ್ವಿರಾಜ್ ಥೈಲ್ಯಾಂಡ್‌ಗೆ ಪ್ರಾಜೆಕ್ಟ್ ವರ್ಕ್ ಹಾಗೂ ಪ್ರವಾಸಕ್ಕೆಂದು ತೆರಳಿದಾಗ ಐಟಿ ಉದ್ಯೋಗಿಯೇ ಆಗಿರುವ ಮೊಂತಕಾನ್ ಸಸೂಕ್ ಪರಿಚಯವಾಗಿದೆ. ವ್ಯಾಲೆಂಟೈನ್ಸ್ ಡೇಯ ಪಾರ್ಟಿಯಲ್ಲಿ ಇವರಿಬ್ಬರು ಪರಿಚಿತರಾಗಿದ್ದಾರೆ. ಪ್ರೇಮಿಗಳ ದಿನದಂದು ಶುರುವಾದ ಈ ಪರಿಚಯ ಬಳಿಕ ಪ್ರೀತಿಗೆ ತಿರುಗಿದೆ. ಎರಡು ಮನಸ್ಸುಗಳು ಒಂದಾದ ಮೇಲೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ. ಮೊದಲಿಗೆ ಒಲ್ಲೆ ಎಂದ ಪೃಥ್ವಿರಾಜ್ ಕುಟುಂಬಸ್ಥರು ಬಳಿಕ ಥೈಲ್ಯಾಂಡ್ ಸುಂದರಿಯ ಗುಣ ನಡೆತೆಗೆ ಫಿದಾ ಆಗಿದ್ದಾರೆ. ಮಂಗಳೂರಿನಲ್ಲಿ ಹುಡುಕಿದರೂ ಇಂತಹ ಹುಡುಗಿ ಸಿಗೋದಿಲ್ಲ ಎಂದು ಇವರಿಬ್ಬರ ಮದುವೆಗೆ ಜೈ ಎಂದಿದ್ದಾರೆ.
ಹೀಗಾಗಿ ಕಡಲ ನಗರಿ ಮಂಗಳೂರು ಈ ವಿಶೇಷ ಜೋಡಿಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ. ಅದು ಕೂಡ ಥೈಲ್ಯಾಂಡ್ ಯುವತಿಯನ್ನು ಕಡಲನಾರೆಯ ಹುಡುಗ ಹಿಂದೂ ಸಂಪ್ರದಾಯದಲ್ಲಿ ಮದುವೆಯಾಗಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ ಕಾಲಲ್ಲಿ ಕಾಲುಂಗುರ, ಮೈ ಮೇಲೆ ಧಾರೆ ಸೀರೆ, ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿ. ನೋಡುವುದಕ್ಕೆ ಥೇಟ್ ಭಾರತೀಯ ನಾರಿಯಂತೆ ಕಾಣಿಸಿದ ಥೈಲ್ಯಾಂಡ್ ದೇಶದ ಯುವತಿ ಮೊಂತಕಾನ್ ಸಸೂಕ್ ಮಂಗಳಾದೇವಿಯ ಸಮ್ಮುಖದಲ್ಲಿ ಪೃಥ್ವಿರಾಜ್ ಅವರ ಕೈ ಹಿಡಿದಿದ್ದಾರೆ. ಈ ಮೂಲಕ ವಿದೇಶಿ ಬೆಡಗಿ ಅಧಿಕೃತವಾಗಿ ಮಂಗಳೂರಿನ ಸೊಸೆಯಾಗಿದ್ದಾಳೆ. ಈ ಸುಂದರ ಜೋಡಿಯ ಮೇಲೆ ಯಾರ ದೃಷ್ಟಿಯು ಬೀಳದಿರಲಿ ಎಂದು ಮಂಗಳೂರಿನ ಜನ ಹರಸಿ, ಹಾರೈಸಿದ್ದಾರೆ.