Police: ಅಧಿಕಾರ ದರ್ಪ ತೋರಿಸಿ ಮಹಿಳೆಯನ್ನು ಮಂಚಕ್ಕೆ ಕರೆದ ಪೋಲಿಸ್ : ವಿಡಿಯೋ ವೈರಲ್.!
Police: ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಒಬ್ಬ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿರುವ ಘಟನೆ ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ ನಡೆದಿದೆ. ಹೌದು, ಇನ್ಸ್‌ಪೆಕ್ಟರ್ ಮೊಹಮ್ಮದ್ ಬಿಲಾಲ್ ಖಾನ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ನಾಚಿಕೆಗೇಡಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
बिहार :जेल नहीं जाना है तो मेरे साथ सेक्स करो’, दारोगा का अश्लील हरकत करते वीडियो वायरल,समस्तीपुर जिले के पटोरी थाने में तैनात एक दारोगा का युवती से अश्लील हरकत करते वीडियो आया सामने @bihar_police @Samastipur_Pol #Bihar #BiharNews #Samastipur pic.twitter.com/AutsP5GlpF
— FirstBiharJharkhand (@firstbiharnews) December 4, 2024
ಮಾಹಿತಿಯ ಪ್ರಕಾರ, ಮಹಿಳೆ ವಿರುದ್ಧ ಎರಡು ವರ್ಷಗಳ ಹಳೆಯ ಪ್ರಕರಣವೊಂದು ನಡೆಯುತ್ತಿದ್ದು, ಈ ಸಂಬಂಧ ಇನ್ಸ್‌ಪೆಕ್ಟರ್ ಆಕೆಯನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿದ್ದರು. ಇನ್ಸ್‌ಪೆಕ್ಟರ್ ಮಹಿಳೆಯನ್ನು ಪ್ರತ್ಯೇಕ ಮನೆಗೆ ಕರೆಸಿ, ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿದಲ್ಲಿ ನಿನ್ನ ಪ್ರಕರಣದಲ್ಲಿ ಸಹಾಯ ಮಾಡುವ ಭರವಸೆ ನೀಡಿ, ಇನ್ಸ್‌ಪೆಕ್ಟರ್ ಆಕೆಯ ಮೇಲೆ ಬಲವಂತಪಡಿಸಲು ಪ್ರಯತ್ನಿಸಿದರು. ಈ ವೇಳೆ ಮಹಿಳೆ ತನ್ನ ಸುರಕ್ಷತೆಗಾಗಿ ಇಡೀ ಘಟನೆಯ ವಿಡಿಯೋವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.
ವೈರಲ್ ವಿಡಿಯೋದಲ್ಲಿ, ಇನ್ಸ್‌ಪೆಕ್ಟರ್ ಮಹಿಳೆಯನ್ನು ಹಿಡಿಯಲು ಪದೇ ಪದೇ ಪ್ರಯತ್ನಿಸುತ್ತಿರುವುದನ್ನು ನೋಡಬಹುದು, ಆದರೆ ಮಹಿಳೆ ಅವನಿಂದ ದೂರ ಹೋಗುವಂತೆ ಕೇಳುತ್ತಾಳೆ. ಆದರೆ, ಸಮಸ್ತಿಪುರ ಎಸ್ಪಿ ಈ ವಿಷಯದ ಬಗ್ಗೆ ಗಮನ ಹರಿಸಿದ್ದಾರೆ. ಕೂಡಲೇ ಕ್ರಮ ಕೈಗೊಂಡ ಎಸ್ಪಿ ಆರೋಪಿ ಇನ್ಸ್ ಪೆಕ್ಟರ್ ನನ್ನು ಅಮಾನತು ಮಾಡಿ ಪ್ರಕರಣ ದಾಖಲಿಸಿದ್ದಾರೆ.