PV Sindhu: ಐಪಿಎಲ್ ತಂಡದೊಂದಿಗೆ ಕೆಲಸ ಮಾಡಿದ ಉದ್ಯಮಿಯ ಜೊತೆ ಸಪ್ತಪದಿ ತುಳಿಯಲಿದ್ದಾರೆ ಪಿವಿ ಸಿಂಧು
PV Sindhu: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಶಟ್ಲರ್ ಪಿವಿ ಸಿಂಧು ಡಿಸೆಂಬರ್ 22 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಪಿವಿ ಸಿಂಧು ಅವರು ಪೋಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೈದರಾಬಾದ್ ಮೂಲದ ವೆಂಕಟ ದತ್ತ ಸಾಯಿ ಅವರೊಂದಿಗೆ ವಿವಾಹವಾಗಲಿದ್ದಾರೆ.
ಸಿಂಧು ಅವರ ತಂದೆ, ‘ಎರಡು ಕುಟುಂಬಗಳು ಪರಸ್ಪರ ಪರಿಚಯವಿದ್ದು, ಹಾಗಾಗಿ ಕೇವಲ ಒಂದು ತಿಂಗಳ ಹಿಂದೆ ಮದುವೆಯ ನಿರ್ಧಾರ ಮಾಡಲಾಗಿದೆ’ ಎಂದು ಹೇಳಿದ್ದಾರೆ. ಡಿಸೆಂಬರ್ 22 ರಂದು ವಿವಾಹ ಸಮಾರಂಭ ಮತ್ತು ಡಿಸೆಂಬರ್ 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಡಿಸೆಂಬರ್ 20 ರಂದು ಮದುವೆಯ ಸಂಭ್ರಮ ಶುರುವಾಗಲಿದೆ.
ಡಬಲ್ ಒಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಪೊಸಿಡೆಕ್ಸ್ ಟೆಕ್ನಾಲಜೀಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಹೈದರಾಬಾದ್ ಮೂಲದ ವೆಂಕಟ ದತ್ತ ಸಾಯಿ ಅವರನ್ನು ಡಿಸೆಂಬರ್ 22 ರಂದು ಉದಯ್‌ಪುರದಲ್ಲಿ ವಿವಾಹವಾಗಲಿದ್ದಾರೆ.
ವಿವಾಹ ಕಾರ್ಯಕ್ರಮಗಳು ಡಿಸೆಂಬರ್ 20 ರಂದು ಪ್ರಾರಂಭವಾಗಲಿದ್ದು, ಎರಡು ಕುಟುಂಬಗಳು ಡಿಸೆಂಬರ್ 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆಯನ್ನೂ ನಡೆಸಲಿವೆ.