National Award: ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ ಎಫ್‌ಐಆರ್!

Share the Article

National Award: ಹಣ ವಂಚನೆ ಆರೋಪದ ಮೇಲೆ ರಾಷ್ಟ್ರ ಪ್ರಶಸ್ತಿ (National Award) ವಿಜೇತ ಸಿನಿಮಾ ನಿರ್ಮಾಪಕ ಅರುಣ್ ರೈ (Arun Rai) ವಿರುದ್ಧ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಯಶವಂತಪುರ ತಾಜ್ ಹೋಟೆಲ್‌ನಲ್ಲಿ ಬಂಟ್ವಾಳ ಮೂಲದ ಉದ್ಯಮಿಯನ್ನು (Businessman) ನಿರ್ಮಾಪಕ ಅರುಣ್ ರೈ ಪರಿಚಯಿಸಿಕೊಂಡಿದ್ದರು. ‘ವೀರ ಕಂಬಳ’ (Veera Kambala) ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಅದರ ಲಾಭಾಂಶದಲ್ಲಿ 60 ಲಕ್ಷ ರೂ. ಕೊಡೋದಾಗಿ ಮೊದಲು ಉದ್ಯಮಿಗೆ ನಂಬಿಸಿ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅರುಣ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಕುರಿತು ಆರ್.ಎಂ.ಸಿ ಯಾರ್ಡ್ ಪೊಲೀಸರು ತನಿಖೆಗೊಂಡಿದ್ದಾರೆ. ಅಂದಹಾಗೆ, ತುಳುವಿನ ಜೀಟಿಗೆ, ವೀರ ಕಂಬಳ ಸಿನಿಮಾವನ್ನು ಅರುಣ್ ರೈ ನಿರ್ಮಾಣ ಮಾಡಿದ್ದಾರೆ.

ಮಾಹಿತಿ ಪ್ರಕಾರ, ಬಂಟ್ವಾಳ ಮೂಲದ ಉದ್ಯಮಿಗೆ ಗೇರು ಬೀಜಾ ಸಂಸ್ಕರಣಾ ಘಟಕದಲ್ಲಿ 25 ಕೋಟಿ ನಷ್ಟವಾಗಿತ್ತು. ಉದ್ಯಮಿಯ ನಷ್ಟದ ಕಥೆಯನ್ನೆ ಪ್ಲಸ್ ಪಾಯಿಂಟ್ ಮಾಡಿಕೊಂಡಿರೋ ನಿರ್ಮಾಪಕ ನನ್ನ ಕಂಪನಿಗಳಲ್ಲಿ ಹೂಡಿಕೆ ಮಾಡಿ ಕೋವಿಡ್ ವೇಳೆ ಆದ ನಷ್ಟ ಸರಿದೂಗಿಸ್ತೇನೆ ಎಂದು ಉದ್ಯಮಿಯನ್ನು ನಂಬಿಸಲಾಗಿದೆ ಎನ್ನಲಾಗಿದೆ.

Leave A Reply