Pope Francis : ನಾರಾಯಣ ಗುರುಗಳನ್ನು ಹಾಡಿ ಹೊಗಳಿದ ಕ್ರೈಸ್ತರ ಪರಮೋಚ್ಚ ಗುರು ಪೋಪ್ – ವ್ಯಾಟಿಕನ್ ಸಿಟಿಯಲ್ಲಿ ‘ಬ್ರಹ್ಮಶ್ರೀ’ ಗೆ ವಿಶ್ವ ನಮನ

Pope Francis: ಬ್ರಹ್ಮ ಶ್ರೀ ನಾರಾಯಣ ಗುರುಗಳ (Brahma Shree Narayana Guru) ಳನ್ನು ಕ್ರೈಸ್ತ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ (Pope Francis) ಅವರು ಹಾಡಿ ಹೊಗಳಿದ್ದಾರೆ.

ಹೌದು, ಭಾರತದ ನಾರಾಯಣ ಗುರುಗಳು ಅವರ ಸಂದೇಶಗಳು ಪ್ರಸ್ತುತ ಜಗತ್ತಿನಲ್ಲಿ ಬಹಳ ಪ್ರಸ್ತುತವಾಗಿವೆ ಎಂದು ಕ್ರೈಸ್ತ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ (Pope Francis) ಹೇಳಿದರು. ಅಲ್ಲದೆ ಪ್ರತಿಯೊಬ್ಬ ಮಾನವರೂ ಒಂದೇ ಕುಟುಂಬ ಎಂದು ಪ್ರತಿಪಾದಿಸಿದ ಸಂತರಲ್ಲಿ ಬ್ರಹ್ಮಶ್ರೀ ನಾರಾಯಣಗುರಗಳು ಅಗ್ರ ಸ್ಥಾನದಲ್ಲಿ ಬರುತ್ತಾರೆ ಇಂದು ಪೋಪ್ ಹೇಳಿದ್ದಾರೆ.

ವ್ಯಾಟಿಕನ್‌ ನಗರದ ಶಿವಗಿರಿ ಮಠದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಭೆಯಲ್ಲಿ ಪೋಪ್ ಅವರು ತಮ್ಮ ಆಶೀರ್ವಚನದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳನ್ನು ಸ್ಮರಿಸಿದರು. ರಾಷ್ಟ್ರಗಳು ಮತ್ತು ವ್ಯಕ್ತಿಗಳ ನಡುವೆ ಅಸಹಿಷ್ಣುತೆ ಮತ್ತು ದ್ವೇಷ ಹೆಚ್ಚುತ್ತಿರುವ ಈ ಕಾಲದಲ್ಲಿ ಗುರುಗಳ ಸಂದೇಶವು ಬಹಳ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು. ಇಂದು ಬೆಳಗ್ಗೆ (ನವೆಂಬರ್ 30) ವ್ಯಾಟಿಕನ್ ನಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಇಟಲಿ, ಐರ್ಲೆಂಡ್, ಯುಎಇ, ಬಹ್ರೇನ್, ಇಂಡೋನೇಷ್ಯಾ, ಇಂಗ್ಲೆಂಡ್, ಅಮೆರಿಕ ಸೇರಿದಂತೆ ಹದಿನೈದಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Leave A Reply

Your email address will not be published.