Home News Bengaluru : ಇಡೀ ಬೆಂಗಳೂರೇ ಗಡ ಗಡ ನಡುಗುವ ಸುದ್ದಿ – ಒಂದೇ ಅಪಾರ್ಟ್‌ಮೆಂಟ್‌ನ 500...

Bengaluru : ಇಡೀ ಬೆಂಗಳೂರೇ ಗಡ ಗಡ ನಡುಗುವ ಸುದ್ದಿ – ಒಂದೇ ಅಪಾರ್ಟ್‌ಮೆಂಟ್‌ನ 500 ಮಂದಿಗೆ ವಿಚಿತ್ರ ಕಾಯಿಲೆ! ಕಾರಣವೇನು ಗೊತ್ತೇ…?

Hindu neighbor gifts plot of land

Hindu neighbour gifts land to Muslim journalist

Bengaluru : ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಬೆಚ್ಚಿಬಿಳಿಸುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಐದು ದಿನಗಳಿಂದ ಕನಕಪುರ ರಸ್ತೆಯ ಕಗ್ಗಲೀಪುರದ 830 ಅಪಾರ್ಟ್‌ಮೆಂಟ್‌ಗಳ ವಸತಿ ಸಮುಚ್ಚಯದ ನಿವಾಸಿಗಳು ನಿಗೂಢ ಕಾಯಿಲೆಯಿಂದ (mysterious disease) ಬಳಲುತ್ತಿದ್ದಾರೆ.

ಹೌದು, ಬ್ರಿಗೇಡ್ ಮೆಡೋಸ್ ಪ್ಲುಮೆರಿಯಾದ (Brigade Meadows Plumeria) ಅಪಾರ್ಟ್‌ಮೆಂಟ್‌ನಲ್ಲಿನ 262 ಕುಟುಂಬಗಳನ್ನು ಒಳಗೊಂಡ ಕನಿಷ್ಠ 500 ನಿವಾಸಿಗಳಿಗೆ ಏಕಕಾಲದಲ್ಲಿ ವಾಂತಿ, ಜ್ವರ (Fever) ಮತ್ತು ಹೊಟ್ಟೆ ನೋವು ಹಾಗೂ ಸೆಳೆತವನ್ನು ಅನುಭವಿಸಿದ್ದಾರೆ ಎಂದು ನಿವಾಸಿಗಳು ಧೃಡಪಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಚಿಕ್ಕ ಮಕ್ಕಳು ಮತ್ತು ಹಿರಿಯ ನಾಗರಿಕರು (Senior Citizen) ವಿಶೇಷವಾಗಿ ದುರ್ಬಲರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಂದಹಾಗೆ,ರೋಗಿಗಳಿಗೆ ಚಿಕಿತ್ಸೆ ನೀಡಿದ ಸ್ಥಳೀಯ ವೈದ್ಯರು ಇದನ್ನು ಗ್ಯಾಸ್ಟ್ರೋಎಂಟರೈಟಿಸ್ ಎಂದು ಹೇಳುತ್ತಾರೆ. ಅಪಾರ್ಟ್‌ಮೆಂಟ್ ನಲ್ಲಿ ಸ್ವಂತ ಬೋರ್‌ವಲ್‌ಗಳಿದ್ದು, ಇದನ್ನು ಪರೀಕ್ಷಿಸಲು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಆದರೆ ನೀರಿನ ಮಾದರಿಗಳಿಗೆ ವಿವಿಧ ಪ್ರಯೋಗಾಲಯಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿರುವುದರಿಂದ ನಿಖರವಾದ ಕಾರಣವನ್ನು ಇನ್ನೂ ತಿಳಿದುಬಂದಿಲ್ಲ.

ಪ್ರಯೋಗಾಲಯ ರಿಪೋರ್ಟ್ ಗಳು ಹೇಳಿದ್ದೇನು?
ಸರ್ಕಾರಿ ಲ್ಯಾಬ್‌ಗೆ ಕಳುಹಿಸಲಾದ ವರದಿಯು ಅದರ ಆರು ಟ್ಯಾಂಕ್‌ಗಳಲ್ಲಿ ಐದರಲ್ಲಿ ನೀರು ಉತ್ತಮವಾಗಿದೆ ಎಂದು ತಿಳಿದು ಬಂದಿದೆ. ಒಂದು ಬ್ಲಾಕ್‌ಗೆ ನೀರು ಪೂರೈಸುವ ಒಂದು ಟ್ಯಾಂಕ್ E.coli ಅನ್ನು ಹೊಂದಿದೆ ಎಂದು ವರದಿಯಾಗಿದೆ.

ಇನ್ನು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಧಾ TNIE ಪ್ರತಿಕ್ರಿಯೆ ನೀಡಿದ್ದು, “ನಮ್ಮ ಸಿಬ್ಬಂದಿ ಜಿಲ್ಲಾ ಕಣ್ಗಾವಲು ಅಧಿಕಾರಿ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಯೊಂದಿಗೆ ಅಪಾರ್ಟ್ಮೆಂಟ್ಗೆ ಭೇಟಿ ನೀಡಿದ್ದಾರೆ. ಇದು ಗ್ಯಾಸ್ಟ್ರೋಎಂಟರೈಟಿಸ್ನ ಅಂದ್ರೆ ಮೃದುವಾದ ಪ್ರಕರಣವೆಂದು ತೋರುತ್ತದೆ. ನಾವು ನಿವಾಸಿಗಳಿಗೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದ್ದೇವೆ ಎಂದಿದ್ದಾರೆ.