Mangaluru : ಬುರ್ಖಾ ಹಾಕಿ ಯುವತಿಯರ ಜೊತೆ ಯುವಕ ಪತ್ತೆ!! ಜನರಿಂದ ಬಿತ್ತು ಧರ್ಮದೇಟು, ಹೇಗೆ ಸಿಕ್ಕಿ ಬಿದ್ದ ಅನ್ನೋದು ಗೊತ್ತಾದ್ರೆ ನಕ್ಕು ನಕ್ಕು ಸುಸ್ತಾಗ್ತೀರಾ!!

Mangaluru : ಬುರ್ಕಾ ಹಾಕಿಕೊಂಡು ಬಂದ ಯುವಕನೋರ್ವ ಯುವತಿಯರ ಜೊತೆ ಸಿಕ್ಕಿಬಿದ್ದ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ(West Bengal ) ನಸೀಬುಲ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕನಾಗಿದ್ದು ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಬುರ್ಖಾ( burka) ಹಾಕಿ ಬಸ್ ನಲ್ಲಿ ಪ್ರಯಾಣಿಸುತಿದ್ದ. ಅಲ್ಲದೆ ಮುಸ್ಲಿಂ ಯುವತಿಯರಂತೆ ಯುವಕ ಬುರ್ಖಾ ಧರಿಸಿದ್ದನು. ಗಾಳಿಗೆ ಮುಖದ ಬಟ್ಟೆ ಹಾರಿದ ಪರಿಣಾಮ ಯುವಕ ಸಿಕ್ಕಿಬಿದ್ದಿದ್ದಾನೆ.
ಇನ್ನು ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದ್ದು, ಪಶ್ಚಿಮ ಬಂಗಾಳದ ನಸೀಬುಲ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ ಎಂದು ತಿಳಿದು ಬಂದಿದೆ. ಧರ್ಮದೇಟು ನೀಡಿದ ಬಳಿಕ ಕುಂಬಳೆ ಪೊಲೀಸರಿಗೆ ಯುವಕನನ್ನು ಸಾರ್ವಜನಿಕರು ಒಪ್ಪಿಸಿದ್ದಾರೆ.
ಅಂದಹಾಗೆ ಇತ್ತೀಚಿನ ದಿನದಲ್ಲಿ ಕಾಮುಕರು ಬುರ್ಖಾ ಹಾಕಿ ಹಲವು ಕಡೆ ತಮ್ಮ ತೆವಲು ತೀರಿಸಿಕೊಳ್ಳುತಿದ್ದಾರೆ. ಈತ ಕೂಡ ಯುವತಿಯರನ್ನು ಕೆಟ್ಟದ್ದಕ್ಕೆ ಬಳಸಿಕೊಳ್ಳಲು ಬುರ್ಖಾ ಹಾಕಿ ಬಸ್ ಏರಿದ್ದಾನೆ . ಅದೃಷ್ಟವಶಾತ್ ಈತನ ಬಣ್ಣ ಬಯಲಾಗಿದೆ.