Kantara: ‘ಕಾಂತಾರ’ ಶೂಟಿಂಗ್ ಗೆ ಸಾಲು ಸಾಲು ವಿಘ್ನ – ಚಿತ್ರತಂಡಕ್ಕೆ ಎದುರಯ್ತಾ ಉಡುಪಿಯ ಈ ದೈವದ ಸಂಕಷ್ಟ?
Kantara: ಕಾಂತಾರ ಸಿನಿಮಾ ನಿರೀಕ್ಷೆ ಮೀರಿ ಯಶಸ್ಸು ಕಂಡಂತಹ ಕನ್ನಡದ ಚೊಚ್ಚಲ ಚಲನಚಿತ್ರ. ರಾಜ್ಯದ ಮಾತ್ರವಲ್ಲ ದೇಶದ ಮಾತ್ರವಲ್ಲ ಇಡೀ ವಿಶ್ವದ ಜನರ ಗಮನಸೆಳೆದಂತಹ ಚಿತ್ರ ಇದು. ಇದೀಗ ಕಾಂತಾರ ಫ್ರೀಕ್ವೆಲ್ ಚಿತ್ರ ಶೂಟಿಂಗ್ ಆಗುತ್ತಿದೆ. ಜನರ ಕುತೂಹಲ ಹೆಚ್ಚಿಸಿದೆ. ಆದರೆ ಈ ನಡುವೆ ಕಾಂತಾರ ಚಿತ್ರತಂಡಕ್ಕೆ ದೈವದ ಸಂಕಷ್ಟ ಎದುರಾಗಿದೆಯೇ ಎಂಬ ಪ್ರಶ್ನೆ ಒಂದು ಕಾಡುತ್ತಿದೆ.
ಹೌದು, ಕಾಂತಾರ(Kantara) ಪ್ರೀಕ್ವೆಲ್ಗೆ ದೈವದ ಸಂಕಷ್ಟ ಶುರುವಾಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಯಾಕೆಂದರೆ ಇತ್ತೀಚಿಗಷ್ಟೇ ಮುದುರಿನಲ್ಲಿ ಶೂಟಿಂಗ್ ಮುಗಿಸಿ ಕೊಲ್ಲೂರಿಗೆ ಹಿಂದಿರುಗುತ್ತಿದ್ದಾಗ, ಜೂನಿಯರ್ ಆರ್ಟಿಸ್ಟ್ಗಳನ್ನು ಕೊಂಡೊಯ್ಯುತ್ತಿದ್ದ ಮಿನಿ ಬಸ್ ಜಡ್ಕಲ್ ಬಳಿ ಅಪಘಾತಕ್ಕೀಡಾಗಿತ್ತು. ಈ ಅಪಘಾತಕ್ಕೆ ಕಾರಣ ಏನು ಅನ್ನೋ ಸ್ಥಳೀಯ ಜನರಲ್ಲಿ ಭಾರೀ ಚರ್ಚೆಯಾಗ್ತಿದೆ. ಸಿನಿಮಾ ಕೆಲಸಗಳು ಭರದಿಂದ ಸಾಗ್ತಿರೋ ಸಮಯದಲ್ಲೇ ಸಾಲು ಸಾಲು ವಿಘ್ನಗಳು ಕೂಡ ಎದುರಾಗ್ತಿದೆ.
ಜಡ್ಕಲ್ ಮಾಸ್ತಿಯಮ್ಮನ(Jadkal Mastamma)ಗುಡಿ ಅಂದ್ರೆ ಉಡುಪಿ ಸುತ್ತಮುತ್ತ ತುಂಬಾನೇ ಫೇಮಸ್ ಆಗಿದೆ. ಇಲ್ಲಿ ನುಡಿದ ಕಾರ್ಣಿಕ ಸುಳ್ಳಾಗಿದ್ದೇ ಇಲ್ಲ ಅಂತಾ ಜನ ನಂಬ್ತಾರೆ. ಮಾಸ್ತಿಯಮ್ಮ ಅಂದ್ರೆ ಊರು ಕಾಯೋ ದೇವಿ. ಹೀಗಾಗಿಯೇ ಕೊಲ್ಲೂರಿಗೆ ಹೋಗೋರು ಈ ತಾಯಿ ಮುಂದೆ ಗಾಡಿ ನಿಲ್ಲಿಸಿ ಪ್ರಾರ್ಥನೆ ಸಲ್ಲಿಸಿ ಮುಂದೆ ಹೋಗ್ತಾರೆ. ಯಾರೇ ಈ ರಸ್ತೆಯಲ್ಲಿ ಹೋದ್ರೂ ದೇವರಿಗೆ ಕೈ ಮುಗಿದು ಮುಂದೆ ಸಾಗ್ತಾರೆ. ಆದ್ರೆ, ಕಾಂತಾರ ಟೀಮ್ ದೇವಿಗೆ ನಮಸ್ಕಾರ ಹಾಕಿಲ್ಲ. ಈ ಊರ ದೇವಿಯನ್ನು ನೆನೆಯಲಿಲ್ಲ. ಇದೇ ಕಾರಣಕ್ಕೆ ಈ ಅಪಘಾತವೂ ನಡೆದಿದೆ ಅಂತ ಇಲ್ಲಿನ ಸ್ಥಳೀಯರು ಮಾತಾಡ್ತಿದ್ದಾರೆ.