Airport: ಭಾರತೀಯ ಮೂಲದ ವೃದ್ಧನಿಂದ ನಾಲ್ವರು ಮಹಿಳೆಯರಿಗೆ ವಿಮಾನದಲ್ಲಿ ಕಿರುಕುಳ!

Share the Article

Airport: ಅಮೆರಿಕಾದಿಂದ ಸಿಂಗಾಪುರಕ್ಕೆ ಹೊರಟಿದ್ದ ವಿಮಾನದಲ್ಲಿ ನಾಲ್ವರು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದಡಿ 73 ವರ್ಷ ಭಾರತೀಯ ಪ್ರಜೆಯೋರ್ವನನ್ನು ಸಿಂಗಾಪುರದ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಆರೋಪಿಯು ಬಾಲಸುಬ್ರಮಣ್ಯಂ ರಮೇಶ್ ಎಂದು ಗುರುತಿಸಲಾಗಿದ್ದು, ಸಿಂಗಾಪುರ್ ಏರ್‌ಲೈನ್ಸ್ (SIA) ವಿಮಾನದಲ್ಲಿ (Airport) ಸಿಂಗಾಪುರಕ್ಕೆ ಪ್ರಯಾಣಿಸುವಾಗ ನಾಲ್ವರು ಮಹಿಳೆಯರಿಗೆ ಕಿರುಕುಳ ನೀಡಿರುವ ಆರೋಪವಿದೆ. ನ.18 ರಂದು ವಿಮಾನದಲ್ಲಿ ಆರೋಪಿಯು ಈ ಕೃತ್ಯ ನಡೆಸಿರುವ ಬಗ್ಗೆ ವರದಿ ಆಗಿದೆ.

ಆರೋಪಿ ಬೆಳಗ್ಗೆ 3:15 ಗಂಟೆಯಿಂದ ಸಂತ್ರಸ್ತೆಯರನ್ನು ಒಬ್ಬೊಬ್ಬರನ್ನಾಗಿ ಬೇರೆ-ಬೇರೆ ಸಮಯದ ಅಂತರದಲ್ಲಿ ಕಿರುಕುಳ ನೀಡಿದ್ದಾನಂತೆ. ಡಿ.13ರಂದು ಆರೋಪಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಸಿಂಗಾಪೂರ್ ಕೋರ್ಟ್​​ ವಿಧಿಸಲಿದೆ ಎಂದು ಹೇಳಲಾಗುತ್ತಿದೆ.

Leave A Reply