Parliament : ಪ್ರಧಾನಿ ಮೋದಿ ಸಂಸತ್ ಪ್ರವೇಶಿಸುತ್ತಿದಂತೆ ಕೇಳಿ ಕೇಳಿ ಬಂತು ಈ ಸಲ ಹೊಸ ಘೋಷಣೆ !! ಮಹಾ ಘರ್ಜನೆಗೆ ಪ್ರತಿಪಕ್ಷಗಳು ಶಾಕ್, ಏನದು?
Parliament : ಸಂಸತ್ತಿನ ಚಳಿಗಾಲದ ಅಧಿವೇಶನ ನಿನ್ನೆ ಇಂದ ಶುರುವಾಗಿದೆ. ಈ ವೇಳೆ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದಂದು ಸಂಸತ್ತಿನ ಕೆಳಮನೆಗೆ ಬಂದ ಪ್ರಧಾನಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಪ್ರಧಾನಿ ಮೋದಿ(PM Modi) ಸಂಸತ್ ಪ್ರವೇಶಿಸುತ್ತಿದಂತೆ ಕೇಳಿ ಬಂದಿದ್ದು ಅದೊಂದೇ ಘೋಷಣೆ.
ಹೌದು, ಸಂಸತ್ತಿನ(Parliament ) ಚಳಿಗಾಲದ ಅಧಿವೇಶನ(Winter Session ) ಮೊದಲ ದಿನ ಪ್ರಧಾನಿ ಮೋದಿ ಸಂಸತ್ ಪ್ರವೇಶಿಸುತ್ತಿದಂತೆ “ಮೋದಿ, ಮೋದಿ” ಮತ್ತು “ಏಕ್ ಹೈ ತೋ ಸೇಫ್ ಹೈ” (ಒಂದಾಗಿದ್ದರೆ ಸುರಕ್ಷಿತವಾಗಿರುತ್ತೇವೆ).ಎಂಬ ಘೋಷಣೆಗಳೊಂದಿಗೆ NDA ಮೈತ್ರಿ ಸದಸ್ಯರು ಸ್ವಾಗತಿಸಿದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಭರ್ಜರಿ ಗೆಲುವಿಗೆ ಕಾರಣವಾದ ಪ್ರಧಾನಿಯವರ ನಾಯಕತ್ವದ ಶ್ಲಾಘನೆಯ ಸಂಕೇತವಾಗಿ ಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗಲಾಯಿತು.
ಇಷ್ಟೇ ಅಲ್ಲದೆ ಹಿಂದುತ್ವದ ಹೆಸರಿನಲ್ಲಿ ಜಾತಿ ವಿಭಜನೆಯನ್ನು ಹೋಗಲಾಡಿಸಲು ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ನೀಡಿದ ಘೋಷವಾಕ್ಯ ಇದಾಗಿದೆ. ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ತಮ್ಮ ಪ್ರಚಾರದ ಸಮಯದಲ್ಲಿ ಮೋದಿ ನೀಡಿದ ‘ಏಕ್ ಹೈ ತೋ ಸೇಫ್ ಹೈ’ ಘೋಷಣೆಯು ಕೆಲಸ ಮಾಡಿದೆ.