Home News Different Marriage : 91ರ ಪತ್ನಿಗೆ 23ರ ಪತಿ, ಹನಿಮೂನ್‌ಗೆ ಹೋದಾಗ ಹಾರಿತು ಹೆಂಡತಿ ಪ್ರಾಣ,...

Different Marriage : 91ರ ಪತ್ನಿಗೆ 23ರ ಪತಿ, ಹನಿಮೂನ್‌ಗೆ ಹೋದಾಗ ಹಾರಿತು ಹೆಂಡತಿ ಪ್ರಾಣ, ಮಧುಚಂದ್ರದಲ್ಲಿ ಆಗಿದ್ದನ್ನು ತಿಳಿದು ಪೊಲೀಸರೇ ಶಾಕ್‌!!

Hindu neighbor gifts plot of land

Hindu neighbour gifts land to Muslim journalist

Different Marriage : ಮದುವೆ (Marriage) ಹಾಗೂ ವಯಸ್ಸು (age) ಈ ಎರಡಕ್ಕೂ ಈಗ ಸಂಬಂಧವಿಲ್ಲ. 10 -12 ವರ್ಷ ವಯಸ್ಸಿನ ಅಂತರ ಇರೋರು ಮದುವೆ ಆಗ್ತಿದ್ದ ಕಾಲ ಈಗಿಲ್ಲ. ಈಗೇನಿದ್ರೂ 30, 50 ವರ್ಷ ಅಂತರವಿರುವ ಜೋಡಿ ಮದುವೆ ಆಗ್ತಿದ್ದಾರೆ. ಅಂತೆಯೇ ಇಲ್ಲೊಂದು ದಂಪತಿ ಮಧ್ಯೆ ಬರೋಬ್ಬರಿ 68 ವರ್ಷ ಅಂತರವಿತ್ತು.

ಹೌದು, 91 ವರ್ಷಗಳ ವೃದ್ಧೆಯನ್ನು 23 ವರ್ಷದ ಯುವಕ ವಿವಾಹವಾಗಿದ್ದನು. ಇಬ್ಬರೂ ಮದುವೆಯಾದರು. ಇತ್ತೀಚೆಗೆ ಹನಿಮೂನ್‌ಗೆ ( Honeymoon) ಹೋಗಿದ್ದರು. ಆದ್ರೆ ವಯಸ್ಸಾದ ಹೆಂಡತಿ ಹನಿಮೂನ್‌ನಲ್ಲಿ ಸಾವನ್ನಪ್ಪಿದ್ದು, ಯುವಕನಿಗೆ ಸಂಕಷ್ಟ ಎದುರಾಗಿದೆ. ಇದಕ್ಕೆ ಪತಿ ಕಾರಣ ಅಂತ ಪೊಲೀಸರು ಅನುಮಾನಿಸಿದ್ರು. ಆದ್ರೆ ಪತಿ ಹೇಳಿದ ಮಾತು ಕೇಳಿ ಎಲ್ಲರೂ ದಂಗಾಗಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರೋದು ಅರ್ಜೆಂಟೀನಾ (Argentina)ದಲ್ಲಿ. ಯುವಕನಿಗೆ ಓದಲು ಹಣವಿಲ್ಲದೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ 91ರ ಹರೆಯದ ಒಂಟಿ ಮಹಿಳೆಯೊಬ್ಬರು ನನ್ನನ್ನು ಮದುವೆಯಾದರೆ ಸಂಸಾರ ಚೆನ್ನಾಗಿರುತ್ತದೆ ಹಾಗೂ ವಿದ್ಯಾಭ್ಯಾಸದ ವೆಚ್ಚವನ್ನು ನಾನೆ ಭರಿಸುವುದಾಗಿ ಹೇಳಿದ್ದಾಳೆ. ಹಾಗಾಗಿ ಸ್ನೇಹಿತೆಗೆ ತನ್ನ ಪಿಂಚಣಿಯ ಸ್ವಲ್ಪ ಹಣವನ್ನು ಕೂಡ ಕೊಡ್ತಾ ಇದ್ಲು. ಕಣ್ಣೆದುರಲ್ಲೇ ಬೆಳೆಯುತ್ತಿದ್ದ ಸ್ನೇಹಿತೆ ಮಗನನ್ನು ವೃದ್ಧೆ ಮದುವೆ ಆದ್ಲು.

ಮದುವೆಯಾದ ಜೋಡಿ ಹನಿಮೂನ್ಗೆ ಹೋಗಿದ್ದರು. ಈ ಸಮಯದಲ್ಲಿ ವೃದ್ಧ ಮಹಿಳೆ ಸಾವನ್ನಪ್ಪಿದ್ದಾಳೆ. ಆಕೆ ನಿಧನದ ನಂತ್ರ ಪತಿ, ಪಿಂಚಣಿ (pension) ಹಣ ಪಡೆಯಲು ಬಂದಿದ್ದಾನೆ. ಆಗ ಅನುಮಾನಗೊಂಡ ಪೊಲೀಸರು, ಯುವಕನ ವಿರುದ್ಧ ದೂರು ದಾಖಲಿಸಿದ್ರು. ಯುವಕನ ವಿಚಾರಣೆ ಶುರು ಮಾಡಿದ್ರು. ವೃದ್ಧ ಮಹಿಳೆ ಪಿಂಚಣಿ ಆಸೆಗೆ ಯುವಕ ಆಕೆಯನ್ನು ಮದುವೆಯಾಗಿದ್ದ. ಹನಿಮೂನ್ನಲ್ಲಿ ಹತ್ಯೆ ಮಾಡಿದ್ದಾನೆ ಎಂಬೆಲ್ಲ ಆರೋಪ ಯುವಕನ ಮೇಲೆ ಬಂತು. ಪೊಲೀಸರು ಯುವಕನನ್ನು ಜೈಲಿ (prison)ಗೆ ಕಳುಹಿಸಲು ಎಲ್ಲ ತಯಾರಿ ಮಾಡಿದ್ದರು. ಇನ್ನೇನು ಜೈಲು ಸಮೀಪವಾಗ್ತಿದೆ ಎಂದಾಗ ಯುವಕ ಸತ್ಯ ಹೇಳಿದ್ದಾನೆ.

ವೃದ್ಧೆ, ಸ್ನೇಹಿತೆ ಮನೆಗೆ ಸಹಾಯ ಮಾಡುವ ಉದ್ದೇಶದಿಂದ ಯುವಕನನ್ನು ಮದುವೆ ಆಗಿದ್ದಳು. ಆದ್ರೆ ಹನಿಮೂನ್ಗೆ ಹೋಗಿದ್ದ ವೇಳೆ ಸಹಜವಾಗಿ ಸಾವನ್ನಪ್ಪಿದ್ದಾಳೆ. ಪೊಲೀಸರು ಮಾತ್ರ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಂದು ಯುವಕ ಹೇಳ್ತಿದ್ದಾನೆ. ಕಾನೂನು ಹೋರಾಟದ ನಂತ್ರ ಯುವಕನಿಗೆ ಜೈಲಿನಿಂದ ಮುಕ್ತಿ ಏನೋ ಸಿಕ್ಕಿದೆ. ಆದ್ರೆ ವೃದ್ಧ ಮಹಿಳೆ ಆಸೆ ಈಡೇರಿಲ್ಲ. ಯುವಕನಿಗೆ ಪಿಂಚಣಿ ಹಣ ನೀಡಲು ಸರ್ಕಾರ ನಿರಾಕರಿಸಿದೆ.