Chicken: ವಾರಕ್ಕೊಮ್ಮೆ ಕೋಳಿ ಮಾಂಸ ತಿನ್ನೋರು ಈ ಭಾಗ ತಿನ್ನಲೇ ಬಾರದು!

Share the Article

Chicken: ಕೋಳಿ ಮಾಂಸ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಪ್ರತಿ ಮನೆಯಲ್ಲೂ ಮೂರು ದಿವಸಕ್ಕೊಮ್ಮೆ ಕೋಳಿ ಮಾಂಸ ಊಟ ಬೇಕೇ ಬೇಕು. ಆದ್ರೆ ಕೋಳಿ (Chicken) ಮಾಂಸ ಹೆಚ್ಚಾಗಿ ತಿನ್ನೋರು ಈ ವಿಚಾರ ತಿಳಿಯಲೇ ಬೇಕು. ಹೌದು, ಪದೇ ಪದೇ ಕೋಳಿ ಮಾಂಸ ತಿನ್ನುವವರು ಕೋಳಿಯ ಈ ಭಾಗವನ್ನು ತಿನ್ನಬಾರದು. ಅದು ಯಾಕೆಂದು ಇಲ್ಲಿ ನೋಡಿ.

ಮುಖ್ಯವಾಗಿ ನೀವು ಯಾವಾಗ ಬೇಕಿದ್ದರೂ ಕೋಳಿ ಮಾಂಸ ತಿನ್ನಿ ಆದರೆ ಈ ಭಾಗ ಮಾತ್ರ ಮುಟ್ಟಲೇ ಬಾರದು. ಅಂದರೆ ಚಿಕನ್ ಸ್ಕಿನ್‌ ತಿನ್ನುವುದು ಒಳ್ಳೆಯದಲ್ಲ ಏಕೆಂದರೆ ಅದರಲ್ಲಿ ಹೆಚ್ಚು ಕೊಬ್ಬು ಇರುತ್ತದೆ ಹಾಗೂ ಫ್ರೆಶ್ ಆಗಿರಲು ಕೆಮಿಕಲ್ ಇಂಜೆಕ್ಷನ್‌ ನೀಡುತ್ತಾರೆ. ಈ ಕಾರಣದಿಂದ ಕೋಳಿ ಚರ್ಮದಿಂದ ದೂರ ಇರಬೇಕು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.

ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಜನರು ಹೆಚ್ಚಾಗಿ ಕೇಳುವುದೇ ಥೈ ಪೀಸ್ ಅಥವಾ ಲೆಗ್‌ ಪೀಸ್‌. ಅದಕ್ಕಾಗಿ ಬಾಯಿಲರ್‌ ಕೋಳಿಯ ತೊಡೆ ಭಾಗಕ್ಕೆ ಇಂಜೆಕ್ಷನ್ ನೀಡಲಾಗುತ್ತದೆ. ತೂಕ ಹೆಚ್ಚಾದಾಗ ಜನರು ಬೇಗ ಖರೀದಿ ಮಾಡುತ್ತಾರೆ ಎಂಬ ಉದ್ದೇಶವು ಹೌದು.

ಇನ್ನು ನೀವು ಧೈರ್ಯವಾಗಿ ನಾಟಿ ಕೋಳಿ ತಿನ್ನಬಹುದು ಏಕೆಂದರೆ ಯಾವುದೇ ಕೆಮಿಕಲ್ಸ್‌ ಅಥವಾ ಇಂಜೆಕ್ಷನ್ ಬಳಸುವುದಿಲ್ಲ. ಅಲ್ಲದೆ ನಾಟಿ ಕೋಳಿ ಹೆಚ್ಚಿಗೆ ದಪ್ಪ ಆದರೆ ಜನರು ಖರೀದಿಸುವುದಿಲ್ಲ.

ಇನ್ನು ಒಮೆಗಾ 3 ಮತ್ತು ಒಮೆಗಾ 6 ಕೊರತೆ ಇರುವವರು ವಾರಕ್ಕೊಮ್ಮೆ ಚಿಕನ್ ಸ್ಕಿನ್ ತಿನ್ನಬಹುದು. ದಿನ ನಿತ್ಯ ಕೋಳಿ ಸೇವಿಸುವವರು ಚಿಕನ್ ಬ್ರೆಸ್ಟ್‌ ತಿನ್ನಬೇಕು.

Leave A Reply